Monday, January 25, 2021

ದಂತ ವೈದ್ಯೆ ಕೊಲೆ ಪ್ರಕರಣ ಆರೋಪಿ ಬಂಧನ

ತ್ರಿಶೂರ್: ಸೆಪ್ಟೆಂಬರ್​ 29ರಂದು ದಂತ ವೈದ್ಯ ಡಾ. ಸೋನಾಗೆ ಕುಟ್ಟನೆಲ್ಲೂರಿನಲ್ಲಿರುವ ಕ್ಲಿನಿಕ್​ನಲ್ಲಿ ಕುಟುಂಬದ ಎದುರೇ ಚಾಕು ಇರಿದು ಪರಾರಿಯಾಗಿದ್ದ ಪವರಟ್ಟಿ ಮೂಲದ ಮಹೇಶ್​ ತ್ರಿಶೂರ್​ನಲ್ಲಿ ಬಚ್ಚಿಟ್ಟುಕೊಂಡಿದ್ದ.

ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್​ 4ರಂದು ತ್ರಿಶೂರ್​ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಂಗಳವಾರ ಸಂಜೆ ಪೂನಕುನ್ನಮ್​ನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬಗ್ಗೆ ಹೇಳಿಕೆ ನೀಡಿರುವ ಆರೋಪಿ ನಾನು ಸೋನಾಳ ಉದ್ಯಮ ಪಾಲುದಾರನಾಗಿದ್ದೆ. ಆಕೆ ತ್ರಿಸ್ಸೂರ್​ನಲ್ಲಿ ಬಿಡಿಎಸ್​ ಅಧ್ಯಯನ ಮಾಡುವಾಗ ನನಗೆ ಪರಿಚಯವಾದಳು. ಡಿವೋರ್ಸ್​ ನಂತರ ತ್ರಿಸ್ಸೂರ್​ಗೆ ಮರಳಿ ಕುರಿಯಾಚಿರಾ ಏರಿಯಾದಲ್ಲಿರುವ ಫ್ಲ್ಯಾಟ್​ನಲ್ಲಿ ನನ್ನೊಂದಿಗೆ ಲಿವ್​ ಇನ್​ ರಿಲೇಷನ್​ನಲ್ಲಿದ್ದಳು.

ಎರಡು ವರ್ಷಗಳ ಹಿಂದೆ ಕುಟ್ಟನೆಲ್ಲೂರಿನಲ್ಲಿ ನಾನು ಮತ್ತು ಸೋನಾ ಡೆಂಟಲ್​ ಕ್ಲಿನಿಕ್​ ಸ್ಥಾಪಿಸಿದ್ದೆವು. ಅದರಲ್ಲಿ ನಾನು ಸಹ ಬಂಡವಾಳ ಹೂಡಿದ್ದೆ. ಕ್ಲಿನಿಕ್​ ಆರಂಭವಾದಾಗಿನಿಂದ ಸೋನಾ ನನಗೆ ಲಾಭವಾಗಲಿ ಅಥವಾ ಬಂಡವಾಳದ ಹಣವನ್ನಾಗಲಿ ಹಂಚಿಕೊಳ್ಳಲಿಲ್ಲ. ಕೇಳಿದರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕ್ಲಿನಿಕ್​ನಿಂದ ಬರುವ ಇಡೀ ಆದಾಯವನ್ನು ತೆಗೆದುಕೊಳ್ಳಲು ಆರಂಭಿಸಿದೆ ಎಂದು ಮಹೇಶ್​ ಹೇಳಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

- Advertisement -

MOST POPULAR

HOT NEWS

Related news

LEAVE A REPLY

Please enter your comment!
Please enter your name here

error: Content is protected !!