Tuesday, September 1, 2026
spot_imgspot_img
spot_imgspot_img

ಮೈಸೂರು ನನಗೆ ತಾಯಿ‌ಮನೆ ಪ್ರೀತಿ‌ಕೊಟ್ಟಿದೆ; ರೋಹಿಣಿ ಸಿಂಧೂರಿ ಹೇಳಿಕೆ

- Advertisement -
- Advertisement -

ಮೈಸೂರು: ಮೈಸೂರು ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಮೈಸೂರು ನನಗೆ ತಾಯಿ‌ಮನೆ ಪ್ರೀತಿ‌ಕೊಟ್ಟಿದೆ. ಮೈಸೂರು ಮಗಳು ಫೀಲಿಂಗ್ ನಲ್ಲಿ ಹೋಗುತ್ತಿದ್ದೇನೆ ಎಂದು ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ.

ಶಿಲ್ಪಾನಾಗ್ ಅವರ ಹತಾಷೆಯ ಹೇಳಿಕೆ ಬಗ್ಗೆ ನನಗೆ ಅನುಕಂಪ ಇದೆ. ಯಾವುದೇ ಅಧಿಕಾರಿಯನ್ನು ತೆಗಳುವುದು ತಪ್ಪು. ಕೆಲಸವನ್ನು ನಾನು ಮಾಡಿ ಮುಗಿಸಿದ್ದೇನೆ ಎಂಬುದು ತಪ್ಪು. ಈ ರೀತಿ ಯಾವ ಸಂಸ್ಥೆಯಲ್ಲಿ ವ್ಯವಸ್ಥೆ ಇದ್ದರೆ ಕೆಲಸ ನಡೆಸುವುದು ಕಷ್ಟ ಎಂದು ಹೇಳಿದರು.

ಹೊಸದಾಗಿ ಬಂದ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೆ. ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಕೋವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ಈ ವರ್ಗಾವಣೆಯ ನಿರೀಕ್ಷೆ ಮಾಡಿರಲಿಲ್ಲ ಎಂದರು.

ಒಳ್ಳೆಯ ಕೆಲಸ ಮಾಡುವ ಟೈಂ ಅಲ್ಲಿ ಈ ವರ್ಗಾವಣೆ ಆಗಿದೆ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ. ಏನ್ ನಡೆದಿದೆ ಹೇಗೆ ನಡೆದಿದೆ ಅನ್ನೋದು ಎಲ್ಲರ ಮುಂದೆ ನಡೆದಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡೋಲ್ಲ. ಥ್ಯಾಂಕ್ಯೂ ಮೈಸೂರು ಎಂದು ನಿರ್ಗಮಿಸಿದ ಡಿಸಿ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!