Friday, April 26, 2024
spot_imgspot_img
spot_imgspot_img

“Naan FM” ತಮಿಳು ರೇಡಿಯೋ ಚಾನೆಲ್’ನಲ್ಲಿ ಮೂಡಿಬರಲಿರುವ ಕನ್ನಡ ಕಾರ್ಯಕ್ರಮ. ಕನ್ನಡದ ಪ್ರತಿಭೆಗಳಿಗೆ ಒಂದು ವೇದಿಕೆ

- Advertisement -G L Acharya panikkar
- Advertisement -

ಮಾರ್ಚ್ 12 ರಂದು, ನುಡಿಕನ್ನಡ – ಕನ್ನಡ ಕಾರ್ಯಕ್ರಮ ‘ನಾನ್ fm’ ಎನ್ನುವ ತಮಿಳು ರೇಡಿಯೋ ಚಾನೆಲ್ ಮೂಲಕ ಪ್ರಸಾರವಾಗಲಿದೆ. ಕನ್ನಡದ ಹಲವು ಪ್ರತಿಭೆಗಳಿಗೆ ಇದು ಒಂದು ವೇದಿಕೆಯಾಗಬೇಕು ಎಂಬ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.

ಈ ಕಾರ್ಯಕ್ರಮದಲ್ಲಿ ಒಟ್ಟು 8 ವಿಭಾಗಗಳಿದ್ದು, ಮಕ್ಕಳಿಂದ ದೊಡ್ಡವರವರೆಗೂ ಎಲ್ಲರ ಮನರಂಜಿಸುವ ವೈವಿಧ್ಯಮಯ ಕಾರ್ಯಕ್ರಮಗಳಿವೆ. ಪ್ರತಿ ಶನಿವಾರ ಸಂಜೆ ನಾಲ್ಕರಿಂದ ಆರು ಗಂಟೆಯವರೆಗೆ ಪ್ರಸಾರವಾಗಲಿದೆ.
ಈ ಕಾರ್ಯಕ್ರಮ ವಿಶ್ವದಾದ್ಯoತ ಆಲಿಸಬಹುದು. Mytuner app ಇನ್ಸ್ಟಾಲ್ ಮಾಡಿಕೊಂಡು “naan fm”ನ್ನು ಆಯ್ಕೆ ಮಾಡಿಕೊಂಡು ನೇರಪ್ರಸಾರ ಕೇಳಬಹುದು. ಅಥವಾ ರೇಡಿಯೋ ಗಾರ್ಡನ್ ಮೂಲಕವೂ ಕೇಳಬಹುದು. Naan media ಎಂದು spotify ಹಾಗೂ ವೆಬ್ಸೈಟ್ ನಲ್ಲೂ ಈ ಕಾರ್ಯಕ್ರಮವನ್ನು ಯಾವಾಗ ಬೇಕಾದರೂ ಕೇಳಬಹುದಾಗಿದೆ. ನಿಮ್ಮ ಪ್ರೀತಿಪಾತ್ರರಿಗೂ ಈ ಸಂದೇಶವನ್ನು ಹಂಚಿಕೊಂಡು ತಮಿಳು ಮಣ್ಣಿನಲ್ಲಿ ಕಸ್ತೂರಿ ಕನ್ನಡದ ಕಂಪನ್ನು ಪಸರಿಸಲು ಕೈಜೋಡಿಸಿ. link- https://mytuner-radio.com/radio/naan-fm-484404/
.

- Advertisement -

Related news

error: Content is protected !!