Friday, May 3, 2024
spot_imgspot_img
spot_imgspot_img

ಪ್ರಿಯಕರನ ಮನೆ ಮೇಲೇರಿ ಯುವತಿ ಆತ್ಮಹತ್ಯೆಗೆ ಯತ್ನ..!

- Advertisement -G L Acharya panikkar
- Advertisement -

ಪ್ರಿಯಕರನ ಮನೆ ಮೇಲೇರಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನಡೆದಿದೆ.

ಯುವಕ ಹಾಗೂ ಯುವತಿ ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದೀಗ ಯುವಕನು ಯುವತಿಗೆ ಕೈ ಕೊಟ್ಟಿದ್ದಾನೆ. ಪ್ರಿಯಕರ ಕೈಕೊಟ್ಟಿದ್ದರಿಂದ ಬೇಸರಗೊಂಡ ಯುವತಿ ನೇರವಾಗಿ ಆತನ ಮನೆಗೆ ತೆರಳಿದ್ದಾಳೆ. ಅಲ್ಲದೆ ಮನೆಯ ಟೆರೇಸ್‍ಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾಳೆ. ಇತ್ತ ಯುವತಿ ಮನೆಗೆ ಬರುತ್ತಿದ್ದಂತೆಯೇ ಯುವಕ ಮನೆಯಿಂದ ಎಸ್ಕೇಪ್ ಆಗಿದ್ದು, ಹೀಗಾಗಿ ಕೈಯಲಿ ಚಾಕು ಹಿಡಿದು ಪ್ರಿಯಕರನ ಮನೆ ಟೆರೇಸ್ ಮೇಲೆ ಯುವತಿ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಿಯಕರನನ್ನು ಇಲ್ಲಿಗೆ ಕರೆಸಿ ಎಂದು ಬೇಡಿಕೆ ಇಟ್ಟಿದ್ದಾಳೆ.

- Advertisement -

Related news

error: Content is protected !!