Friday, April 26, 2024
spot_imgspot_img
spot_imgspot_img

ನಾಪೋಕ್ಲು ವ್ಯಾಪ್ತಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳ ಮನವಿ ದಂಡದ ಎಚ್ಚರಿಕೆ

- Advertisement -G L Acharya panikkar
- Advertisement -

ಕೊಡಗು: ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮನೆಮಾಡಿದೆ.ಕಾರಣ ಸರ್ಕಾರದ ಕೊರೋನಾ ನಿಯಂತ್ರಣ ನಿಯಮಗಳು ಗಾಳಿಗೆ ತೂರಿರೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಾಪೋಕ್ಲು ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಪಾಲಿಸದೆ ಸಾರ್ವಜನಿಕರು ಸುತ್ತಾಡೋದು ಒಂದು ಕಡೆಯಾದರೆ ಮತ್ತೊಂದು ಕಡೆ ಖಾಸಗಿ ಕ್ಲಿನಿಕ್ ಗಳು ಕೊರೋನಾ ರೋಗದ ಲಕ್ಷಣಗಳು ಇರುವ ರೋಗಿಗಳಿಗೆ ಆರೋಗ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಎಲ್ಲರೀತಿಯ ಚಿಕಿತ್ಸೆ ನೀಡುತ್ತಿರುವುದರಿಂದ ನಾಪೋಕ್ಲು ಖಾಸಗಿ ಕ್ಲಿನಿಕ್ ಗಳಿಗೆ ಹೊರ ಊರುಗಳಿಂದಲೂ ಸಹ ಸೋಂಕಿತರು ಚಿಕಿತ್ಸೆಗೆಂದು ಬರುತ್ತಿದ್ದು ಇದರಿಂದ ವ್ಯಾಪ್ತಿಯಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಸ್ಥಳೀಯರ ಆರೋಪ.

ಆದ್ದರಿಂದ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ವ್ಯಾಪ್ತಿಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಪ್ರಕರಣಗಳಿಗೆ ಹಾಗೂ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಚಿಕಿತ್ಸೆ ನೀಡುತ್ತಿರುವ ಖಾಸಗಿ ಕ್ಲಿನಿಕ್ ಗಳಿಗೆ ಕಡಿವಾಣ ಹಾಕಬೇಕಾಗಿದೆ.

ನಾಪೋಕ್ಲು ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ದಿನೇದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು
ಈ ರೀತಿ ಮುಂದುವರೆದರೆ ನಾಪೋಕ್ಲು ಕೊರೋನಾ ಹಾಟ್ಸ್ಪಾಟ್ ಆಗುವುದರಲ್ಲಿ ಸಂಶಯವಿಲ್ಲ.

ನಾಪೋಕ್ಲು ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಲ್ಲಿ ರೋಗ ಲಕ್ಷಣಗಳಿದ್ದರೂ ಬಹುತೇಕರು ಕೊರೋನಾ ಪರೀಕ್ಷೆ ಮಾಡಲು ಹಿಂಜರಿಯುತ್ತಿದ್ದಾರೆ. ರೋಗಿಗಳು ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆ ಇಲ್ಲ ಧೈರ್ಯದಿಂದ ರೋಗಲಕ್ಷಣಗಳು ಇರುವವರು ಸರಕಾರ ಮಾರ್ಗಸೂಚಿಯಂತೆ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ. ಸೋಂಕು ದೃಢಪಟ್ಟರೆ ಹಿಂದಿನ ಆಗೆ 14 ದಿನಗಳ ಕಾಲ ಕೋವಿಡ್ ಕೇಂದ್ರದಲ್ಲಿ ಇರುವ ಅವಶ್ಯಕತೆ ಇಲ್ಲ ಕೇವಲ ಎರಡು ಗಂಟೆಗಳ ಪರೀಕ್ಷೆಗೊಳಪಟ್ಟು ಪರೀಕ್ಷಿಸಿದ ನಂತರ ಅವರವರ ಮನೆಗೆ ಹೋಗಬಹುದು.

ಹತ್ತು ದಿನಗಳ ಕಾಲ ಮನೆಯಲ್ಲೇ ಸರ್ಕಾರದ ಮಾರ್ಗಸೂಚಿ ಪಾಲಿಸಿ ಹೊರಬಾರದೆ ಇದ್ದರೆ ಸಾಕು,ಇದರಿಂದ ಕೊರೋನಾ ಮಹಾಮಾರಿ ಹರಡುವುದನ್ನು ತಡೆಗಟ್ಟಬಹುದು ಹಾಗೂ ಸಾರ್ವಜನಿಕರು ಸಹಕರಿಸುವಂತೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ರೋಹನ್ ಪೂವಯ್ಯ, ಮತ್ತು ಮದನ ಮೋಹನ ಮನವಿ ಮಾಡಿದ್ದಾರೆ.

ನಾಪೋಕ್ಲು ಪಟ್ಟಣಕ್ಕೆ ಸರ್ಕಾರದ ಮಾರ್ಗಸೂಚಿ ಪಾಲಿಸದೆ ಸಾಮಾಜಿಕ ಅಂತರ ಪಾಲಿಸದೆ
ಮಾಸ್ಕ್ ಧರಿಸದೆ ಪಟ್ಟಣಕ್ಕೆ ಬರುವವರಿಗೆ ದಂಡ ವಿಧಿಸಲಾಗುವುದು ಯಾವುದೇ ಕಾರಣಕ್ಕೂ ಸರ್ಕಾರದ ಮಾರ್ಗಸೂಚಿ ಪಾಲಿಸದೆ ಅಗತ್ಯ ಕೆಲಸಗಳಿಗಲ್ಲದೆ ಹೊರ ಬರಬೇಡಿ,
ಇಂದಿನಿಂದ ಕಟ್ಟುನಿಟ್ಟಾಗಿ ಗ್ರಾಮ ಪಂಚಾಯಿತಿಯಿಂದ ಹಾಗೂ ಪೊಲೀಸ್ ಇಲಾಖೆ ವತಿಯಿಂದ ದಂಡ ವಿಧಿಸಲಾಗುವುದು. ಸಾರ್ವಜನಿಕರು ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸುವುದರೊಂದಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ನಾಪೋಕ್ಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!