- Advertisement -
- Advertisement -
ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಮರಾಠಿ ಕಿರುತರೆ ನಟಿ ಕೇತಕಿ ಚಿತಾಲೆ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಅಸಲಿಗೆ, ವಕೀಲರಾದ ನಿತಿನ್ ಭಾವೆ ಅವರು ಬರೆದಿದ್ದ ಫೇಸ್‌ಬುಕ್ ಪೋಸ್ಟ್ ಅನ್ನು ನಟಿ ಕೇತಕಿ ಚಿತಾಲೆ ಶೇರ್ ಮಾಡಿದ್ದರು. ಆದರೆ ಕೇತಕಿ ಚಿತಾಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಕೀಲರಾದ ನಿತಿನ್ ಭಾವೆ ಬರೆದಿದ್ದ ಪೋಸ್ಟ್ ನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರಾದ್ ಪವಾರ್ ಅವರ ವಿರುದ್ಧ ಅಸಭ್ಯ ಪದಗಳನ್ನು ಬಳಸಲಾಗಿತ್ತು ಎಂಬ ಆರೋಪವಿದೆ.
ಮಹಾರಾಷ್ಟ್ರದ ನ್ಯಾಯಾಲಯವು ಮರಾಠಿ ನಟಿ ಕೇತಕಿ ಚಿತಾಳೆ ಅವರನ್ನು ಬಂಧಿಸಿ, ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- Advertisement -








