- Advertisement -
- Advertisement -


ಮೃಗಾಲಯದಲ್ಲಿ 10 ಆಸ್ಟ್ರಿಚ್ ಪಕ್ಷಿಗಳು ನಿಗೂಢ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನ ವಂದಲೂರು ಅರಿಗ್ನರ್ ಅಣ್ಣಾ ಝೂವಲಾಜಿಕಲ್ ಪಾರ್ಕ್’ನಲ್ಲಿ ನಡೆದಿದೆ. ಕಳೆದ ಅ. 27 ರಂದು ಐದು ಆಸ್ಟ್ರಿಚ್’ಗಳು ಇದ್ದಕ್ಕಿದ್ದಂತೆ ಸಾವನ್ನಪಿದ್ದವು. ಬಳಿಕ ಇದೇ ರೀತಿ ಮತ್ತೆ ಐದು ಆಸ್ಟ್ರಿಚ್’ಗಳು ಸಾವನ್ನಪ್ಪಿದೆ. ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪಾರ್ಕ್ನಲ್ಲಿ ಒಟ್ಟು 37 ಆಸ್ಟ್ರಿಚ್’ಗಳಿದ್ದವು, ಈಗಾಗಲೇ ಇದರಲ್ಲಿ 10 ಮೃತಪಟ್ಟಿದ್ದು, ಉಳಿದವುಗಳನ್ನು ರಕ್ಷಿಸಲು ಕ್ರಮ ವಹಿಸಲಾಗಿದೆ ಎಂದು ಪಾರ್ಕ್ನ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಪಕ್ಷಿಗಳ ರಕ್ತ ಮತ್ತು ಇತರ ಮಾದರಿಗಳನ್ನು ಭೂಪಾಲ್’ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸಿಸಸ್’ಗೆ ಕಳುಹಿಸಲಾಗಿದ್ದು ಅಲ್ಲಿನ ತಜ್ಞರು ಆಸ್ಟ್ರಿಚ್ಗಳಿಗೆ ಕೊರೊನಾ ಸೋಂಕು ಇರುವುದನ್ನು ತಳ್ಳಿ ಹಾಕಿದ್ದಾರೆ ಎಂದು ತಮಿಳುನಾಡು ವನ್ಯಜೀವಿ ಮುಖ್ಯ ಅಧಿಕಾರಿ ಡಾ ಶೇಖರ್ ಕುಮಾರ್ ತಿಳಿಸಿದ್ದಾರೆ.


- Advertisement -








