- Advertisement -
- Advertisement -





ನೆಲಮಂಗಲ: ಸಂಘದ ಕಂತು ಕಟ್ಟಲೆಂದು ಇಟ್ಟಿದ್ದ ಹಣದಿಂದ ಗಂಡ 200 ರೂಪಾಯಿ ತೆಗೆದು ಸ್ವಂತ ಖರ್ಚಿಗೆ ಬಳಸಿದ್ದ ವಿಚಾರವಾಗಿ ನಡೆದ ಜಗಳದಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಮಡ ಘಟನೆ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸುಮಾ (30.ವ) ಎಂದು ತಿಳಿದುಬಂದಿದೆ.
ಮದುವೆಯಾಗಿ 8 ವರ್ಷವಾಗಿ ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಸುಮಾ ಸಂಘದ ಕಂತು ಕಟ್ಟಲೆಂದು ಗಂಡ ಚಂದ್ರಶೇಖರ್ ಗೆ ಕಾಣದಂತೆ 1300 ರೂಪಾಯಿ ಮನೆಯಲ್ಲಿಟ್ಟಿದ್ದಳು. ಆದರೆ, ಚಂದ್ರಶೇಖರ್ ಆ ದುಡ್ಡಲ್ಲಿ 200 ರೂಪಾಯಿ ತೆಗೆದು ಸ್ವಂತ ಖರ್ಚಿಗೆ ಬಳಸಿದ್ದ. ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಪತಿ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದ ಸಂದರ್ಭ ಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಊಟಕ್ಕೆಂದು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








