Friday, April 19, 2024
spot_imgspot_img
spot_imgspot_img

ಕುಸ್ತಿಪಟು ಕೊಲೆ ಪ್ರಕರಣ; ಸುಶೀಲ್ ಕುಮಾರ್ ಅವರ ನಾಲ್ವರು ಸಹಚರರ ಬಂಧನ!

- Advertisement -G L Acharya panikkar
- Advertisement -

ನವದೆಹಲಿ: ದೆಹಲಿಯ ಕ್ರಿಡಾಂಗಣದಲ್ಲಿ ನಡೆದ ಕುಸ್ತಿಪಟು ಸಾಗರ್ ಧಂಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸುಶೀಲ್ ಕುಮಾರ್ ಅವರ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ.

ಬಂಧಿತ ನಾಲ್ವರು ಸುಶೀಲ್ ಕುಮಾರ್ ಅವರ ಸಹಚರರಾಗಿದ್ದು ಸಾಗರ್ ಕೊಲೆ ಪ್ರಕರಣದಲ್ಲಿ ಅವರನ್ನು ಕಾಂಜ್ವಾಲಾ ಪ್ರದೇಶದಿಂದ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಸಂಬಂಧ ನಡೆದ ಪಿತೂರಿ ಮತ್ತು ಸನ್ನಿವೇಶಗಳ ಬಗ್ಗೆ ಎಲ್ಲಾ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸುವುದು ಮಾತ್ರ ಬಾಕಿಯಿದೆ ಎಂದು ಪೊಲೀಸರು ಹೇಳಿದ್ದಾರೆ. ನಾಲ್ವರು ಆರೋಪಿಗಳನ್ನು ಭೂಪೇಂದರ್ ಅಲಿಯಾಸ್ ಭೂಪಿ, ಮೋಹಿತ್ ಅಲಿಯಾಸ್ ಭೋಲಿ, ಗುಲಾಬ್ ಅಲಿಯಾಸ್ ಪಹ್ಲ್ವಾನ್ ಮತ್ತು ಮಜೀತ್ ಅಲಿಯಾಸ್ ಚುನ್ನಿಲ್ ಲಾಲ್ ಎಂದು ಗುರುತಿಸಲಾಗಿದೆ, ನಾಲ್ವರೂ ಹರಿಯಾಣ ನಿವಾಸಿಗಳಾಗಿದ್ದು, ಅವರು ಕಲಾ ಅಸೌಡಾ-ನೀರಜ್ ಬವಾನಾ ಗ್ಯಾಂಗ್‌ನ ಸಕ್ರಿಯ ಸದಸ್ಯರಾಗಿದ್ದಾರೆ.

ನಿರ್ದಿಷ್ಟ ಮಾಹಿತಿಯ ಮೇರೆಗೆ ರೋಹಿಣಿ ಜಿಲ್ಲಾ ದೆಹಲಿ ಪೊಲೀಸ್ ವಿಶೇಷ ಸಿಬ್ಬಂದಿ ಗೆವೆರಾ ರೈಲ್ವೆ ಕ್ರಾಸಿಂಗ್ ಬಳಿ ಬಲೆ ನಾಲ್ವರನ್ನು ಬಂಧಿಸಿದ್ದಾರೆ. “ನಾಲ್ವರು ಆರೋಪಿಗಳು ಮೇ 4 ರ ಮಧ್ಯರಾತ್ರಿಯಲ್ಲಿ ಅವರು ಛತ್ರಾಸಲ್ ಕ್ರೀಡಾಂಗಣಕ್ಕೆ ಹೋಗಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಘಟನೆಗಳ ಅನ್ವಯ ಅಪರಾಧದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ವಿವರಗಳನ್ನು ಅವರು ಬಹಿರಂಗ ಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 4 ರಂದು ಕುಸ್ತಿಪಟುಗಳ ನಡುವೆ ಜಗಳ ನಡೆದ ಘಟನೆ ವರದಿಯಾಗಿದ್ದು, ಇದರಲ್ಲಿ ಕೆಲವು ಕುಸ್ತಿಪಟುಗಳು ಗಾಯಗೊಂಡಿದ್ದರು ಹಾಗೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!