Saturday, April 20, 2024
spot_imgspot_img
spot_imgspot_img

ಹೊಸ ಭತ್ತದ ಬೆಳೆಯನ್ನು ಅಭಿವೃದ್ಧಿಪಡಿಸಿದ ಚೀನಾ..! ಒಮ್ಮೆ ನಾಟಿ ಮಾಡಿದರೆ 4 ವರ್ಷ ಫಸಲು ನೀಡುತ್ತದೆ..! – ಎಷ್ಟೊಂದು ಪ್ರಯೋಜನಾ ಗೊತ್ತಾ..?

- Advertisement -G L Acharya panikkar
- Advertisement -

ಚೀನಾ ಒಂದಲ್ಲೊಂದು ಕ್ರಾಂತಿಗೆ ಕೈಹಾಕುತ್ತಲೇ ಇರುತ್ತದೆ. ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಿರುವ ಡ್ರ್‍ಯಾಗನ್ ರಾಷ್ಟ್ರ ಕೃಷಿಯಲ್ಲೂ ಸೈ ಎನಿಸಿಕೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾವಯವ ಕೃಷಿ ಬೆಳೆಯುವುದರಲ್ಲಿ ಇವರು ನಿಪುಣರು ಅಂದರೂ ತಪ್ಪಿಲ್ಲ. ಹಸಿರು ಕ್ರಾಂತಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಹೊಸ ರೀತಿಯ ಅಕ್ಕಿ ಬೆಳೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಚೀನಾದ ವಿಜ್ಞಾನಿಗಳು ನಾವು ನೀವೆಲ್ಲಾ ಊಹಿಸಲಾಗದ ಭತ್ತದ ಬೆಳೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಒಮ್ಮೆ ನೆಟ್ಟರೆ ನಾಲ್ಕು ವರ್ಷ ಬೆಳೆಯುವ ಭತ್ತ. ಅಂದರೆ ಎಂಟು ಬೆಳೆಗಳು ಸಿಗುವಂತೆ ತಳಿಯನ್ನು ಅಭಿವೃದ್ಧಿಸಿದ್ದಾರೆ. ಈಗಾಗಲೇ ಚೀನಾದಲ್ಲಿ ರೈತರು ಈ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದಾರೆ. ಯುನ್ನಾನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಈ ತಳಿಗೆ ’ಪಿಆರ್-23′ ಹೆಸರಿಡಲಾಗಿದೆ.

ಚೀನಾದಲ್ಲಿ ಈಗ ನಿಯಮಿತವಾಗಿ ಬಳಸಲಾಗುವ ಓರ್ಜ್ಯಾ ಸಟಿವಾ ಅಕ್ಕಿಯನ್ನು ಆಫ್ರಿಕಾದ ಮತ್ತೊಂದು ರೀತಿಯ ಅಕ್ಕಿಯೊಂದಿಗೆ ಹೈಬ್ರಿಡೈಸ್ ಮಾಡಿ ‘PR-23’ ಅನ್ನು ರಚಿಸಲಾಗಿದೆ.

ವಿಶೇಷತೆ ಏನು ಗೊತ್ತಾ..?
ಈ ಭತ್ತವನ್ನು ಒಮ್ಮೆ ನೆಟ್ಟರೆ ಸಾಕು. ನಾಲ್ಕು ವರ್ಷಗಳಲ್ಲಿ ಎಂಟು ಬಾರಿ ಕೊಯ್ಲು ಬರುತ್ತದೆ. ಸಾಮಾನ್ಯ ಭತ್ತಕ್ಕೆ ಹೋಲಿಸಿದರೆ ಇಳುವರಿಯೂ ಹೆಚ್ಚು. ಭತ್ತದ ಸರಾಸರಿ ಇಳುವರಿ ಹೆಕ್ಟೇರಿಗೆ 6.8 ಟನ್. ಒಮ್ಮೆ ನೆಟ್ಟರೆ ಇನ್ನೂ ಏಳು ಬೆಳೆಗಳವರೆಗೆ ನಾಟಿ ವೆಚ್ಚ ಕಡಿಮೆಯಾಗುತ್ತದೆ. ಕಾರ್ಮಿಕರ ಸಮಸ್ಯೆ ಇರುವುದಿಲ್ಲ. ಪ್ರತಿ ಬಾರಿ ಬೀಜಗಳನ್ನು ಖರೀದಿಸುವ ಅಗತ್ಯವಿಲ್ಲ. ಅಲ್ಲದೆ ಹೆಚ್ಚಿನ ರಾಸಾಯನಿಕಗಳನ್ನು ಬಳಸುವ ಅಗತ್ಯವಿಲ್ಲ ಎಂದಿದ್ದಾರೆ ವಿಜ್ಞಾನಿಗಳು.

ಸಾಮಾನ್ಯ ಅಕ್ಕಿಗೆ ಹೋಲಿಸಿದರೆ ಈ ಭತ್ತದ ಬೆಳೆಗೆ ಕನಿಷ್ಠ 58 ಪ್ರತಿಶತದಷ್ಟು ವೆಚ್ಚ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಸಮಯ ಕಳೆದಂತೆ ಅದು ನೆಲದಲ್ಲಿ ದೃಢವಾಗಿ ಬೇರೂರುತ್ತದೆ. ಇದರಿಂದ ಇಳುವರಿ ಹೆಚ್ಚುತ್ತದೆ. ಈ ಬೆಳೆ ರೈತರಿಗೆ ತುಂಬಾ ಪ್ರಯೋಜನಕಾರಿ. ಇದು ಪರಿಸರಕ್ಕೂ ಒಳ್ಳೆಯದು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

- Advertisement -

Related news

error: Content is protected !!