Tuesday, June 23, 2026
spot_imgspot_img
spot_imgspot_img

ಹೊಸ ಮಾದರಿಯ ಕೊರೊನಾ

- Advertisement -
- Advertisement -

ಲಂಡನ್​​: ಇಂಗ್ಲೆಂಡ್​​ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್​ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ಇತರೆ ವೇರಿಯಂಟ್​​ಗಳಿಗಿಂತ ಈ  ಹೊಸ ಮ್ಯೂಟಂಟ್ ಕೊರೊನಾ ವೈರಸ್​ ವೇಗವಾಗಿ ಹರಡುತ್ತಿದೆ.

ಹೀಗಾಗಿ ಸದ್ಯ ಇಂಗ್ಲೆಂಡ್​​ನಲ್ಲಿ ಸಾಂಕ್ರಾಮಿಕ ಮಿತಿಮೀರಿದ್ದು, ನಿನ್ನೆ ಒಂದೇ ದಿನ ದಾಖಲೆಯ 35,928 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪ್ರಧಾನಿ ಬೋರಿಸ್​​ ಜಾನ್ಸನ್​ ಸರ್ಕಾರ 4ನೇ ಹಂತದ ಲಾಕ್​ಡೌನ್​ ವಿಧಿಸಿದೆ. ಜೊತೆಗೆ ಇಂದು ತುರ್ತು ಸಭೆ ನಡೆಸಲು ಅವರು ನಿರ್ಧರಿಸಿದ್ದಾರೆ.

ಈ ವೇಳೆ ಇಂಗ್ಲೆಂಡ್​ನಿಂದ ಹೋಗುವ ಹಾಗೂ ವಿದೇಶಗಳಿಂದ ಇಂಗ್ಲೆಂಡ್​ಗೆ ಬರುವ ವಿಮಾನಗಳ ಸಂಚಾರ ನಿರ್ಬಂಧಿಸುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ.

ನೂತನ ಕೊರೊನಾ ವೈರಸ್​ ಸೋಂಕು ಅತ್ಯಂತ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆ ಇಂಗ್ಲೆಂಡ್​ನಿಂದ ಬರುವ ವಿಮಾನಗಳಿಗೆ ಈಗಾಗಲೇ ಹಲವು ದೇಶಗಳು ನಿರ್ಬಂಧ ವಿಧಿಸಿವೆ.

- Advertisement -

Related news

error: Content is protected !!