Wednesday, April 24, 2024
spot_imgspot_img
spot_imgspot_img

*ಓಲಾ, ಉಬರ್ ದರ ನಿಯಂತ್ರಣ -ಕೇಂದ್ರ ಸರ್ಕಾರ ನಿಯಮಾವಳಿ !

- Advertisement -G L Acharya panikkar
- Advertisement -

ನವದೆಹಲಿ: ಆಪ್ ಆಧಾರಿತ ಕ್ಯಾಬ್ ಸಂಸ್ಥೆಗಳಾದ ಓಲಾ, ಉಬರ್ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿಯಮಾವಳಿ ಪ್ರಕಟಿಸಿದೆ.
ಈ ನಿಯಮಾವಳಿ ಪ್ರಕಾರ ಮೂಲ ದರದ ಒಂದೂವರೆ ಪಟ್ಟು ಮಾತ್ರ ವಿಧಿಸಬಹುದಾಗಿದೆ. ಇದಕ್ಕೂ ಹೆಚ್ಚಿನ ದರಗಳನ್ನು ಅವುಗಳು ವಿಧಿಸುವಂತಿಲ್ಲ.


ಪೀಕ್‌ ಅವರ್‌ನಲ್ಲಿ ಹೆಚ್ಚಿನ ರೀತಿಯಲ್ಲಿ ದರ ವಸೂಲು ಮಾಡುವುದರ ಮೇಲೆ ಕೂಡ ನಿಯಂತ್ರಣ ಹೇರಿದೆ. ಹೀಗಾಗಿ ಮೂಲ ದರದ ಒಂದೂವರೆ ಪಟ್ಟು ಹೆಚ್ಚು ಮಾತ್ರ ದರ ವಿಧಿಸಲು ಸಾಧ್ಯವಾಗಲಿದೆ.
ಹಂಚಿಕೆಯ ಆಧಾರ (ಪೂಲಿಂಗ್‌)ದಲ್ಲಿ ಮಹಿಳೆಯರು ಕ್ಯಾಬ್‌ಗಳಲ್ಲಿ ಪ್ರಯಾಣಿಸುವುದಿದ್ದರೆ, ಸಹ ಪ್ರಯಾಣಿಕರು ಮಹಿಳೆಯರಾಗಿದ್ದರೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ನಿಯಮಾವಳಿಯಲ್ಲಿ ಹೇಳಲಾಗಿದೆ.


ಯಾವುದೇ ಪ್ರಯಾಣವನ್ನು ಚಾಲಕ ಅಥವಾ ಪ್ರಯಾಣಿಕ ರದ್ದು ಮಾಡಿದರೆ ಆ ಪ್ರಯಾಣಕ್ಕೆ ವಿಧಿಸಲಾಗುವ ಶೇ.10ರಷ್ಟು ಮೊತ್ತ ನೀಡಬೇಕು. ಆದರೆ ಅದು, 100 ರೂ.ಗಳಿಗಿಂತ ಹೆಚ್ಚಾಗುವಂತಿಲ್ಲ. ಇದರಿಂದಾಗಿ ವಿನಾಕಾರಣ ಪ್ರಯಾಣ ರದ್ದು ಮಾಡುವವರಿಗೆ ನಷ್ಟವಾಗಲಿದೆ.


ದೇಶದಲ್ಲಿ ಇದೇ ಮೊದಲ ಬಾರಿಗೆ ಆಪ್‌ ಆಧಾರಿತ ಕ್ಯಾಬ್‌ ಸೇವೆಗಳನ್ನು ನಿಯಂತ್ರಿಸಲು ‘ಮೋಟಾರ್‌ ವೆಹಿಕಲ್‌ ಆಯಗ್ರೆಗೇಟರ್‌ ಗೈಡ್‌ಲೈನ್ಸ್‌ 2020′ ಅನ್ವಯ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. 12 ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ ಚಾಲಕರಿಗೆ 10 ಗಂಟೆಗಳ ಕಡ್ಡಾಯ ವಿಶ್ರಾಂತಿ ನೀಡಬೇಕು. ಜತೆಗೆ ಚಾಲಕರಿಗೆ ಒಂದು ಪ್ರಯಾಣದ ಮೊತ್ತ ಶೇ.80ರಷ್ಟು ಮೊತ್ತ ಪಡೆದುಕೊಳ್ಳಲು ಅವಕಾಶವಿದೆ ಎಂದು ಕೇಂದ್ರ ಹೇಳಿದೆ.

- Advertisement -

Related news

error: Content is protected !!