Monday, May 6, 2024
spot_imgspot_img
spot_imgspot_img

ಹನಿಮೂನ್‌ಗೆಂದು ರೈಲು ಹತ್ತಿದ ನವವಧು ನಾಪತ್ತೆ..!!

- Advertisement -G L Acharya panikkar
- Advertisement -
vtv vitla

ಆಗಷ್ಟೇ ಮದುವೆಯಾಗಿ ಪತಿ ಜೊತೆ ತೆರಳಿದ್ದ ಮಹಿಳೆಯೊಬ್ಬರು ರೈಲಿನಿಂದ ನಾಪತ್ತೆಯಾಗಿರುವ ಘಟನೆ ಕುರಿತು ಬಿಹಾರದ ಕಿಶನ್‌ಗಂಜ್ ರೈಲು ನಿಲ್ದಾಣದಲ್ಲಿ ದೂರು ದಾಖಲಾಗಿದೆ. ಕಾಜಲ್ ಕುಮಾರಿ ನಾಪತ್ತೆಯಾದ ಮಹಿಳೆ ಎನ್ನಲಾಗಿದೆ ರೈಲ್ವೇ ಪೊಲೀಸರು, ಮಹಿಳೆಯ ಮೊಬೈಲ್‌ನ ಲೊಕೇಶನ್ ಅನ್ನು ಹೊರತೆಗೆದು ತನಿಖೆಯಲ್ಲಿ ತೊಡಗಿದ್ದಾರೆ.

ಪತಿ ಪ್ರಿನ್ಸ್ ಕುಮಾರ್, ಕುಧಾನಿ ಮುಜಾಫರ್‌ಪುರ ನಿವಾಸಿ, ಮಿಥನ್‌ಪುರ ವಿದ್ಯುತ್ ಇಲಾಖೆಯಲ್ಲಿ ಜೆಇ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆಬ್ರವರಿ 22 ರಂದು ಮಧುಬನಿ ರಾಜನಗರದ ನಿವಾಸಿ ಮಹೇಶ್ ಕುಮಾರ್ ಅವರ ಪುತ್ರಿ ಕಾಜಲ್ ಕುಮಾರಿಯೊಂದಿಗೆ ವಿವಾಹವಾಗಿತ್ತು.

6 ತಿಂಗಳ ಹಿಂದೆಯೇ ಮದುವೆಯಾಗಿದ್ದರು. ಕೌಟುಂಬಿಕ ಕಾರಣಗಳ ಹಿನ್ನೆಲೆ 6 ತಿಂಗಳಿಂದ ಹನಿಮೂನ್‌ಗೆ ಹೋಗಲು ಆಗಿರಲಿಲ್ಲ. ಕಾಜಲ್ ಕುಮಾರಿ ದಂಪತಿ ಡಾರ್ಜಲಿಂಗ್‌ಗೆ ಹನಿಮೂನ್ ಟ್ರಿಪ್ ಹೊರಟಿದ್ದಾರೆ. ಮುಜಾಫರ್‌ಪುರ್‌ ರೈಲ್ವೆ ನಿಲ್ದಾಣದಲ್ಲಿ ನವದೆಹಲಿ- ನ್ಯೂ ಜಲ್ಪೈಗುರಿ ಸೂಪರ್‌ಫಾಸ್ಟ್ ರೈಲನ್ನು ಹತ್ತಿದ್ದಾರೆ. ರೈಲು ನಿಲ್ದಾಣಕ್ಕೆ ಬಂದ ನನ್ನ ಹೆಂಡತಿ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಳು. ಆದರೆ ಮರಳಿ ವಾಪಸ್ ಬರಲೇ ಇಲ್ಲ. ರೈಲು ಹೊರಡಲು ಶುರುವಾದಾಗ ನಾನು ಎಲ್ಲಾ ಬೋಗಿಗಳನ್ನು ಹುಡುಕಿದೆ. ಎಲ್ಲೂ ನನ್ನ ಹೆಂಡತಿ ಸಿಕ್ಕಿಲ್ಲ. ಕೊನೆಗೆ ನಾನು ವಾಪಸ್ ಮುಜಾಫರ್‌ಪುರ್‌ಗೆ ಬಂದು ನಾಪತ್ತೆ ದೂರು ಕೊಟ್ಟಿದ್ದೇನೆ ಎಂದು ಪತಿ ಪ್ರಿನ್ಸ್ ಕುಮಾರ್ ಹೇಳಿದ್ದಾರೆ.

ನನ್ನ ಹೆಂಡತಿಯನ್ನು ಡ್ರಗ್ಸ್‌ ವ್ಯಸನಿ ಗ್ಯಾಂಗ್‌ ಅಪಹರಿಸಿರೋ ಸಾಧ್ಯತೆ ಇದೆ. ನನ್ನ ಹೆಂಡತಿಗೆ ಯಾವುದೇ ಅಕ್ರಮ ಸಂಬಂಧಗಳು ಇರಲಿಲ್ಲ ಎಂದು ಹೇಳಿದ್ದಾರೆ. ಈ ಪ್ರಕರಣ ದಾಖಲಿಸಿರುವ ಬಿಹಾರ ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!