Monday, August 10, 2026
spot_imgspot_img
spot_imgspot_img

ಮುಂದಿನ ಸಿ ಜೆ ಐ ಆಗಿ ನ್ಯಾ| ಎನ್ ವಿ ರಮಣ ಹೆಸರು ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ

- Advertisement -
- Advertisement -

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎಸ್​.ಎ ಬೋಬ್ಡೆ ಅವರು ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಎನ್​.ವಿ ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಬೋಬ್ಡೆ ಅವರು ಏಪ್ರಿಲ್ 23ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಕಳೆದ ವಾರ ಅವರಿಗೆ ಮುಂದಿನ ಸಿಜೆಐ ಸ್ಥಾನಕ್ಕೆ ಹೆಸರು ಶಿಫಾರಸು ಮಾಡುವಂತೆ ಕೇಳಿತ್ತು. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್​ ಕಳೆದ ಶುಕ್ರವಾರ ಬೋಬ್ಡೆ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದರು.

ಪ್ರಸ್ತುತ ಬೋಬ್ಡೆ ಅವರ ನಂತರ ಸುಪ್ರೀಂಕೋರ್ಟ್​ನಲ್ಲಿ ಅತ್ಯಂತ ಹಿರಿಯ ಜಡ್ಜ್ ನ್ಯಾ.​​ ಎನ್​​.ವಿ ರಮಣ. ಅವರಿಗೆ 2022 ಆಗಸ್ಟ್​​ 6ರವರೆಗೆ ಅಂದ್ರೆ ಒಂದು ವರ್ಷ 4 ತಿಂಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲು ಅವಧಿ ಇರಲಿದೆ.

ಆಂಧ್ರಪ್ರದೇಶದ ಕೃಷಿ ಹಿನ್ನೆಲೆಯ ಕುಟುಂಬದವರಾದ ರಮಣ ಅವರು 2000 ಇಸವಿಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್​ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಬಳಿಕ ದೆಹಲಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂಕೋರ್ಟ್​ ಜಡ್ಜ್​​ ಆಗಿ ನೇಮಕಗೊಂಡಿದ್ದರು.

- Advertisement -

Related news

error: Content is protected !!