Thursday, July 23, 2026
spot_imgspot_img
spot_imgspot_img

ಎನ್‌ಐಎಕಾರ್ಯಾಚರಣೆ-ಇಬ್ಬರು ಶಂಕಿತ ಉಗ್ರರ ಬಂಧನ!!

- Advertisement -
- Advertisement -

ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿರುವ ಎನ್‌ಐಎ, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ. ಈ ಪೈಕಿ ಓರ್ವ ತಮಿಳುನಾಡಿನಲ್ಲಿ ಬಂಧಿತನಾಗಿದ್ದಾನೆ.

ಅಹ್ಮದ್ ಅಬ್ದುಲ್ ಸಿದರ್ ಎಂಬ (40) ಆರೋಪಿಯನ್ನು ತಮಿಳುನಾಡಿನ ರಾಮನಾಥಪುರದಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಇರ್ಫಾನ್‌ ನಾಸಿರ್‌ನನ್ನು (33) ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿ ಬಂಧಿಸಲಾಗಿದೆ.


ಇಬ್ಬರೂ ಕೂಡಾ ಐಸಿಸ್ ಸಂಘಟನೆಯ ಸಂಪರ್ಕ ಹೊಂದಿದ್ದರು ಮತ್ತು ತಮಿಳುನಾಡಿನಲ್ಲಿ ಬಂಧಿತನಾಗಿರುವ ಅಹ್ಮದ್ ಅಬ್ದುಲ್ ಸಿದರ್, ಚೆನ್ನೈನ ಬ್ಯಾಂಕ್ ಒಂದರಲ್ಲಿ ಬ್ಯುಸಿನೆಸ್ ಅನಾಲಿಸ್ಟ್‌ ಕೆಲಸದಲ್ಲಿದ್ದ ಹಾಗೂ ಬೆಂಗಳೂರಿನಲ್ಲಿ ಬಂಧಿತನಾಗಿರುವ ಇರ್ಫಾನ್ ನಾಸಿರ್, ಅಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಯುವಕರಲ್ಲಿ ಮತಾಂಧತೆಯನ್ನು ತುಂಬಿ ಅವರನ್ನು ಸಿರಿಯಾದಲ್ಲಿ ಐಸಿಸ್ ಉಗ್ರರಿಗೆ ಕೈಜೋಡಿಸಲು ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಇದೆ.


ಇಬ್ಬರನ್ನೂ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರು ಪಡಿಸಲಾಗಿತ್ತು. ಸದ್ಯ ಶಂಕಿತ ಉಗ್ರರನ್ನು 10ದಿನಗಳ ಎನ್ ಐ ಎ ಕಸ್ಟಡಿಗೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

- Advertisement -

Related news

error: Content is protected !!