Friday, April 26, 2024
spot_imgspot_img
spot_imgspot_img

ರಾತ್ರಿ ಕರ್ಫ್ಯೂ: ಕರಾವಳಿಯಲ್ಲಿ ಉತ್ಸವ, ಮೆಹಂದಿ, ಕೋಲಗಳಿಗೆ ನಿರ್ಬಂಧ!

- Advertisement -G L Acharya panikkar
- Advertisement -

ಮಂಗಳೂರು: ಕೋವಿಡ್ ನವರೂಪವನ್ನು ತಡೆ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿರುವ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ಡಿ. 24ರ ರಾತ್ರಿ 11ರಿಂದ ಜ.2ರ ಬೆಳಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ತುರ್ತು ಸೇವೆಗಳಿಗೆ ರಿಯಾಯಿತಿ ಇರುತ್ತದೆ.

ರಾತ್ರಿ ನಡೆಯುವ ಯಕ್ಷಗಾನ, ದೇವಸ್ಥಾನ ಗಳ ಉತ್ಸವಗಳು, ಮೆಹಂದಿಯಂತಹ ಕಾರ್ಯಕ್ರಮಗಳು, ಕೋಲಗಳು ನಡೆಯುವಂತಿಲ್ಲ. ರಾತ್ರಿ 11ರ ಬಳಿಕ ಯಾವುದೇ ಸಂಸ್ಥಾಪನೆಗಳು ತೆರೆದು ಕೊಂಡಿರುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಸ್ಪಷ್ಟಪಡಿಸಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಪ್ರದರ್ಶನವಾಗುತ್ತಿರುವ ಯಕ್ಷಗಾನ ಪ್ರದರ್ಶನವನ್ನು ರಾತ್ರಿ 11 ಗಂಟೆಯ ಒಳಗೆ ಪೂರ್ಣಗೊಳಿಸುವಂತೆ ದ.ಕ. ಜಿಲ್ಲಾಡಳಿತ ಸೂಚಿಸಿದೆ.

- Advertisement -

Related news

error: Content is protected !!