Friday, April 26, 2024
spot_imgspot_img
spot_imgspot_img

ಸರಳತೆ ಮೆರೆದ ‘ ನಿಶ್ಯಬ್ಧಂ ‘ ಸುಂದರಿ

- Advertisement -G L Acharya panikkar
- Advertisement -

‘ನಿಶ್ಯಬ್ಧಂ’ ಚಿತ್ರದ ಯಶಸ್ಸಿನಲ್ಲಿರುವ ನಟಿ ಅನುಷ್ಕಾ ಶೆಟ್ಟಿ ಬಿಡುವು ಪಡೆದುಕೊಂಡು ಸ್ನೇಹಿತರೊಂದಿಗೆ ಆಂಧ್ರದ ಸುಂದರ ತಾಣಗಳಲ್ಲಿ ಪ್ರವಾಸ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಗೆ ಸೇರಿದ ಪೋಲಾವರಂಗೆ ಸ್ವೀಟಿ ಭೇಟಿ ನೀಡಿದ್ದಾರೆ.

ಆತ್ಮೀಯರೊಂದಿಗೆ ಪೋಲಾವರಂನ ನಂದೀಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಗೋದಾವರಿ ನದಿ ನಡುವೆ ಬೋಟಿನಲ್ಲಿ ಅನುಷ್ಕಾ ಪ್ರಯಾಣಿಸುತ್ತಿರುವ ಫೋಟೋಗಳು ಹಾಗೂ ದೇವಸ್ಥಾನದ ಬಳಿ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಂದೀಶ್ವರ ದೇವಾಲಯ, ಪೋಲಾವರಂ ಪಂಚಾಯಿತಿ ವ್ಯಾಪ್ತಿಯ ಗೋದಾವರಿ ನದಿ ಮಧ್ಯದಲ್ಲಿದೆ.

ಅನುಷ್ಕಾ ಮೇಕಪ್ ಇಲ್ಲದೆ, ಸರಳವಾದ ಉಡುಪು ಧರಿಸಿ ಮುಖಕ್ಕೆ ಮಾಸ್ಕ್​ ಧರಿಸಿ ತೆರಳಿದ್ದರಿಂದ ಹೆಚ್ಚಿನ ಜನರು ಅವರನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಫೋಟೋಗಳು ವೈರಲ್ ಆದಾಗಲೇ ಬಹಳಷ್ಟು ಜನರು ಅಯ್ಯೋ ಸ್ವೀಟಿಯನ್ನು ಕಂಡುಹಿಡಿಯಲಾಗಲಿಲ್ಲವಲ್ಲಾ ಎಂದು ಬೇಸರಪಟ್ಟುಕೊಂಡಿದ್ಧಾರೆ. ಕೆಲವರು ಮಾತ್ರ ಅವರನ್ನು ಕಂಡುಹಿಡಿದು ಮಾತನಾಡಿಸಿ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಜೊತೆ ಕಾಸ್ಟ್ಯೂಮ್ ಡಿಸೈನರ್ ಪ್ರಶಾಂತಿ ಹಾಗೂ ಇನ್ನಿತರರು ತೆರಳಿದ್ಧಾರೆ.

- Advertisement -

Related news

error: Content is protected !!