Tuesday, April 16, 2024
spot_imgspot_img
spot_imgspot_img

ನ್ಯೂಜಿಲೆಂಡ್ ಸಂಸತ್​ನಲ್ಲಿ ಮಾತೃಭಾಷೆ ಪ್ರಸ್ತಾಪ ಮಾಡಿ ಭಾಷಣ ಆರಂಭಿಸಿದ ಭಾರತದ ಮಹಿಳೆ

- Advertisement -G L Acharya panikkar
- Advertisement -

ನ್ಯೂಜಿಲೆಂಡ್: ನ್ಯೂಜಿಲೆಂಡ್ ಸರ್ಕಾರದಲ್ಲಿ ಭಾರತೀಯ ಮೂಲದ ಮಹಿಳೆ ಪ್ರಿಯಾಂಕ ರಾಧಕೃಷ್ಣ ಇದೇ ಮೊಟ್ಟ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಸತ್ ಉದ್ದೇಶಿಸಿ ಮಾತನಾಡಿರುವ ಪ್ರಿಯಾಂಕ ತಮ್ಮ ಮಾತೃಭಾಷೆಯನ್ನ ಸಂಸತ್​ನಲ್ಲಿ ಪ್ರಸ್ತಾಪ ಮಾಡಿ ಭಾಷಣ ಆರಂಭಿಸಿದ್ದಾರೆ.

ಮಲಯಾಳಂ ಭಾಷೆಯಲ್ಲಿ ತಮ್ಮ ಮಾತನ್ನ ಆರಂಭಿಸಿ ಮಾತನಾಡುತ್ತಿರುವ ದೃಶ್ಯದ ತುಣುಕನ್ನ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.
41 ವರ್ಷದ ಪ್ರಿಯಾಂಕ ರಾಧಾಕೃಷ್ಣನ್ ಭಾರತದಲ್ಲಿ ಜನಿಸಿ ಶಿಕ್ಷಣಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿ ತಮ್ಮ ಶಿಕ್ಷಣವನ್ನ ಮುಗಿಸಿಕೊಂಡು ನ್ಯೂಜಿಲೆಂಡ್​ನಲ್ಲಿ ನೆಲೆಸಿದ್ದಾರೆ ಅಂತಾ ಮಾಧ್ಯಮಗಳು ವರದಿ ಮಾಡಿವೆ. ಸೆಪ್ಟೆಂಬರ್ 2017 ರಲ್ಲಿ ಅಲ್ಲಿನ ಲೇಬರ್ ಪಕ್ಷಕ್ಕೆ ಸೇರಿ ಪ್ರಿಯಾಂಕ ಆಯ್ಕೆ ಆಗಿದ್ದಾರೆ.

ಮೂರು ವರ್ಷಗಳ ನಂತರ ಪ್ರಧಾನಿ ಜಸಿಂಡಾ ಅರ್ಡೇರ್ನ್​ ಇತ್ತೀಚೆಗಷ್ಟೇ ತಮ್ಮ ಸಂಪುಟಕ್ಕೆ 5 ಹೊಸ ಮಂತ್ರಿಗಳನ್ನ ಸೇರಿಸಿಕೊಂಡಿದ್ದಾರೆ. ಅವರಲ್ಲಿ ಪ್ರಿಯಾಂಕ ರಾಧಾಕೃಷ್ಣ ಕೂಡ ಒಬ್ಬರಾಗಿದ್ದಾರೆ. ಇವರ ಮಾತೃಭಾಷೆ ಪ್ರೇಮಕ್ಕೆ ದೇಶದೆಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

- Advertisement -

Related news

error: Content is protected !!