Saturday, April 20, 2024
spot_imgspot_img
spot_imgspot_img

ಕು| ಶ್ರೀರಕ್ಷಾ ಎಸ್.ಎಚ್ ಪೂಜಾರಿ ಹಾಡಿರುವ “ಓ ಭಗವತಿ” ತುಳು ಭಕ್ತಿಗೀತೆ ಬಿಡುಗಡೆ.

- Advertisement -G L Acharya panikkar
- Advertisement -

ವರದಿ : ಕಿರಣ್ ಕೋಟ್ಯಾನ್ ಕೇಪು.

ವಿಟ್ಲ: ವಿಟಿವಿ ಸಹಭಾಗಿತ್ವದಲ್ಲಿ ಕು| ಶ್ರೀರಕ್ಷಾ ಎಸ್.ಎಚ್ ಪೂಜಾರಿ ಹಾಡಿರುವ “ಓ ಭಗವತಿ”  ತುಳು ಭಕ್ತಿಗೀತೆ ನವೆಂಬರ್ 27ರಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ ಬಿಡುಗಡೆಗೊಳಿಸಿದರು.

ಜೀವನದಲ್ಲಿ ಅನೇಕ ಏರುಪೇರುಗಳು, ಕಷ್ಟ ಸುಖಗಳು ನಿರಂತರವಾಗಿ ಒಂದರ ಮೇಲೊಂದು  ಬರುತ್ತಲೇ ಇರುತ್ತದೆ. ಈ ನಡುವೆ ನಿರಾಶಾವಾದಿಗಳಾಗದೇ ಆಶಾವಾದಿಯಾಗಿಯೇ  ಬದುಕಿನ ಯಶಸ್ಸಿನ ಹಾದಿಯನ್ನು ಹುಡುಕುತ್ತಾ ಮುಂದುವರಿಯಬೇಕು.  ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ಕು| ಶ್ರೀರಕ್ಷಾ ಎಸ್.ಎಚ್ ಪೂಜಾರಿ ಕಲೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪ್ರದರ್ಶಿಸಿರುವುದು ಯಶಸ್ಸಿನ ಮೆಟ್ಟಿಲು ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ ಅಭಿಪ್ರಾಯಪಟ್ಟರು.


ಅವರೇ ರಚಿಸಿರುವ” ಓ ಭಗವತಿ” ಎನ್ನುವ ತುಳು ಭಕ್ತಿಗೀತೆಯನ್ನು ಕು| ಶ್ರೀರಕ್ಷಾ ಎಸ್.ಎಚ್ ಪೂಜಾರಿ ಅವರು ಹಾಡಿರುವ ವೀಡಿಯೋ ಹಾಡನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು. ಅಪೇಕ್ಷೆ ಪಟ್ಟು ಸಂತಸವನ್ನು ಹಂಚಲು ಅಸಾಧ್ಯ. ಆದರೆ ಆಶಾವಾದಿಗಳಾಗಿ ಬಾಳಿದಲ್ಲಿ ಎಂತಹ ಸಂಧಿಗ್ಧ ಸ್ಥಿತಿಯನ್ನು ದಾಟಲು ಸಾಧ್ಯ ಎಂದರು.


ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ ಸುವರ್ಣ, ವಿಶ್ವಮಂಗಳ ಪ್ರೌಢಶಾಲೆ ಕೊಣಾಜೆ ಮುಖ್ಯೋಪಾಧ್ಯಾಯಿನಿ ಪ್ರಿಯ .ಎ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಕೊಲ್ಯದ ಅಧ್ಯಕ್ಷ ವೇಣುಗೋಪಾಲ ಕೊಲ್ಯ, ಲಯನ್ಸ್ ಕ್ಲಬ್ ಕುಡ್ಲ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ರವಿ ಕೊಂಡಾಣ,

ನಿರೂಪಕಿ, ಹಿನ್ನೆಲೆಧ್ವನಿ, ಸಾಮಾಜಿಕ ಜಾಲತಾಣದಲ್ಲಿ ತೆರೆಮರೆಯ ಪ್ರತಿಭೆಗಳ ಪರಿಚಯ ಬರಹದ ಬರಹಗಾರ್ತಿ ರೇಣುಕಾ ಕಣಿಯೂರು, ಜಯಪ್ರಕಾಶ್ ಶೆಟ್ಟಿ ಇನ್ಸೂರೆನ್ಸ್ ಅಡ್ವೈಸರ್, ವಿಜಯ್ ಕುಮಾರ್ ಪಾವೂರು ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ಗ್ರಾಮಚಾವಡಿ ಕೊಣಾಜೆ , ಗಿರೀಶ್.ಕೆ ಉದ್ಯಮಿಗಳು ಕೈರಂಗಳ, ವಿಜೇತ್ ಪಜೀರು, ಶ್ರೀಮತಿ ಸತ್ಯವತಿ, ಜೀವನ್ ಸೋಮೇಶ್ವರ, ಯತೀಶ್ ಕೊಲ್ಯ, ನೊಣಯ್ಯ ಪೂಜಾರಿ, ತಿಮ್ಮಪ್ಪ ಶೆಟ್ಟಿ, ಅಭಿಷೇಕ್, ಹರೀಶ್ ಪೂಜಾರಿ ಕೊಣಾಜೆ ಉಪಸ್ಥಿತರಿದ್ದರು. ಶ್ರೀ ತ್ಯಾಗಂ ಹರೇಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀಮತಿ ಸುರೇಖಾ ಹರೀಶ್ ಪೂಜಾರಿ ಧನ್ಯವಾದವಿತ್ತರು.

ವರದಿ : ಕಿರಣ್ ಕೋಟ್ಯಾನ್ ಕೇಪು.

- Advertisement -

Related news

error: Content is protected !!