


ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಶ್ರೀ ದತ್ತಾಂಜನೇಯ ಕ್ಷೇತ್ರ, ದಕ್ಷಿಣ ಗಾಣಗಾಪುರದಲ್ಲಿ ಅ.15 ಗುರುವಾರ ಲಲಿತಾ ಪಂಚಮಿ ಮಹೋತ್ಸವ ಮತ್ತು ಚಂಡಿಕಾ ಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಗ್ಗೆ 9.00 ಗಂಟೆಯಿಂದ ಗಣಪತಿ ಹವನ ಹಾಗೂ ಚಂಡಿಕಾ ಯಾಗ ಆರಂಭಗೊಳ್ಳಲಿದೆ. ಬೆಳಗ್ಗೆ 10.30ರಿಂದ ಧರ್ಮಸಭೆ ಹಾಗೂ ‘ಶ್ರೀ ಒಡಿಯೂರು ಕಲಾಸಿರಿ’ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳು ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನ ನೀಡಲಿದ್ದು, ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ದಿವ್ಯ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ.
'ಶ್ರೀ ಒಡಿಯೂರು ಕಲಾಸಿರಿ' ಪ್ರಶಸ್ತಿ ಪುರಸ್ಕೃತರು;
ಎಂ.ಕೆ. ರಮೇಶ್ ಆಚಾರ್ಯ ಮಂಗಳಗಾರು – ಕೇಂದ್ರ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರು ಮತ್ತು ಪ್ರಸಂಗಕರ್ತರು, ನಾರಾಯಣ ಭಟ್ ಕೆಯ್ಯೂರು – ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು, ಕೊಡೆತ್ತೂರು ಸಚ್ಚಿದಾನಂದ ಉಡುಪ – ಸಂಪಾದಕರು, ‘ಅನಂತ ಪ್ರಕಾಶ’ ಮಾಸಿಕ ಪತ್ರಿಕೆ , ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ – ನೃತ್ಯ ಗುರುಗಳು, ಸನಾತನ ನಾಟ್ಯಾಲಯ (ರಿ.) ಮಂಗಳೂರು ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಮಧ್ಯಾಹ್ನ 12.30ರಿಂದ ಚಂಡಿಕಾ ಯಾಗದ ಪೂರ್ಣಾಹುತಿ, ಶ್ರೀ ವಜ್ರಮಾತೆಗೆ ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 2.30ರಿಂದ ವಿಶ್ವಗುರು ನೃತ್ಯಕಲಾ ಶಾಲೆ ಕುರಿಯ ಇವರಿಂದ ಭರತನಾಟ್ಯ ಪ್ರದರ್ಶನ ಹಾಗೂ ಸಂಜೆ 6 ಗಂಟೆಯಿಂದ ಸಾಮೂಹಿಕ ಸ್ವಯಂವರ ಪಾರ್ವತೀಪೂಜೆ, ಅಷ್ಟಾವಧಾನಸೇವೆ ಮತ್ತು ಭದ್ರಕಾಳಿಗೆ ವಿಶೇಷ ಪೂಜೆ ಜರುಗಲಿದೆ.
ಅ.20 ಮಂಗಳವಾರ ಬೆಳಗ್ಗೆ 9.00ಕ್ಕೆ ಸಾಮೂಹಿಕ ವಾಹನ ಪೂಜೆ ಹಾಗೂ ಅ.21 ಬುಧವಾರ ಶ್ರೀ ಶಾರದಾ ಮಹೋತ್ಸವ ಮತ್ತು ಸಾಮೂಹಿಕ ವಿದ್ಯಾರಂಭ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








