- Advertisement -
- Advertisement -
ವಿಟ್ಲ: ವಿಟ್ಲದ ಒಕ್ಕೆತ್ತೂರು ನಿವಾಸಿ, ಮೂರು ತಿಂಗಳ ಹಿಂದೆ ವಿದೇಶದಿಂದ ಬಂದಿದ್ದ ಸೋಂಕಿತ ಯುವಕನ ಪತ್ನಿಗೂ ಪಾಸಿಟಿವ್ ಬಂದಿದೆ.
ಕೆಲವು ದಿನಗಳ ಹಿಂದೆ ಒಕ್ಕೆತ್ತೂರು ನಿವಾಸಿ 31 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಆತನ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಕುಟುಂಬದ ಎಂಟು ಮಂದಿಯ ಕೊವೀಡ್ ಪರೀಕ್ಷೆಗೆ ನಡೆಸಲಾಗಿತ್ತು. ಅವರ ಪೈಕಿ ಯುವಕನ ಸಹೋದರನಿಗೆ ಪಾಸಿಟಿವ್ ಪತ್ತೆಯಾಗಿದ್ದು, ಇದೀಗ ಯುವಕನ ಪತ್ನಿಯಲ್ಲಿಯೂ ಪಾಸಿಟಿವ್ ಪತ್ತೆಯಾಗಿದೆ. ಇದೀಗ ಒಂದೇ ಕುಟುಂಬದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಎರಡು ಮನೆ ಸೀಲ್ ಡೌನ್ ಮಾಡಲಾಗಿದೆ. ಇನ್ನುಳಿದ ಕುಟುಂಬದ ಸದಸ್ಯರ ವರದಿ ಬರಲು ಬಾಕಿ ಇದೆ.
- Advertisement -