Sunday, June 7, 2026
spot_imgspot_img
spot_imgspot_img

ಹಳೆಯ ನೋಟುಗಳ ವಿನಿಮಯ ಮಾಡಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳ ಬಂಧನ

- Advertisement -
- Advertisement -

ಬೆಂಗಳೂರು: ಹಳೆಯ ನೋಟುಗಳ ವಿನಿಮಯ ಮಾಡಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳನ್ನ ಬೆಂಗಳೂರಿನ ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ. ಸುಲ್ತಾನ್ ಪಾಳ್ಯ ನಿವಾಸಿ ಮುದಾಸೀರ್ ಮತ್ತು ಒಡಿಶಾ ಮೂಲದ ಶೇಕ್ ತುಪೇಲ್ ಅಲಿ ಬಂಧಿತ ಆರೋಪಿಗಳು.

ಆರೋಪಿಗಳು ಒಂದು ಕೋಟಿ ಮೌಲ್ಯದ ಹಳೆಯ ನೋಟುಗಳನ್ನ ವಿನಿಮಯ ಮಾಡಲು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಆರ್ ಟಿ ನಗರ ಪೊಲೀಸರು ಮುದಾಸೀರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಒಂದು ಸಾವಿರ ಮುಖಬೆಲೆಯ  80 ಲಕ್ಷ ರೂಪಾಯಿ ಹಳೆಯ ನೋಟು ಪತ್ತೆಯಾಗಿದೆ.

ಪೊಲೀಸರು ಮುದಾಸೀರ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶೇಕ್ ತುಪೇಲ್ ಬಗ್ಗೆ ಬಾಯ್ಬಿಟ್ಟಿದ್ದಾನೆ. ಶೇಕ್ ತುಪೇಲ್ ಒಡಿಶಾ ಮೂಲದ ವ್ಯಕ್ತಿಯಾಗಿದ್ದು, ಈತ ಸುಮಾರು 2.5 ಲಕ್ಷ ಹೊಸ ನೋಟು ಕೊಟ್ಟು ನಿಷೇಧಿತ ಹಳೆಯ ನೋಟುಗಳನ್ನ ಪಡೆದಿದ್ದನು.

ಅಲ್ಲದೇ ಬಂಧಿತ ಇಬ್ಬರು ಆರೋಪಿಗಳಾದ ಮುದಾಸೀರ್ ಬಳಿ 80 ಲಕ್ಷ ರೂಪಾಯಿ ಹಾಗೂ ಶೇಕ್ ತುಪೇಲ್ ಬಳಿ 20 ಲಕ್ಷ ರೂಪಾಯಿ ನಿಷೇಧಿತ ಹಳೆಯ ನೋಟುಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

ಇನ್ನೂ ಪ್ರಕರಣದಲ್ಲಿ ಮತ್ತೊರ್ವ ಆರೋಪಿ ತಲೆಮರೆಸಿಕೊಂಡಿದ್ದು ಆರ್ ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!