Thursday, April 25, 2024
spot_imgspot_img
spot_imgspot_img

ಒಂದು ವರ್ಷದ ಅವಧಿಯಲ್ಲಿ 100 ಕೋಟಿಗೂ ಮಿಕ್ಕಿದ ಅನುದಾನ ಬಿಡುಗಡೆ

- Advertisement -G L Acharya panikkar
- Advertisement -

ಬಂಟ್ವಾಳ: ಸಂಗಬೆಟ್ಟು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 100 ಕೋಟಿಗೂ ಮಿಕ್ಕಿದ ಅನುದಾನ ಬಿಡುಗಡೆ ಯಾಗಿದ್ದು ಅನೇಕ ಅಭಿವೃದ್ಧಿ ಕಾರ್ಯ ಗಳು ನಡೆದಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಅವರು ಸಂಗಬೆಟ್ಟು ಜಿ.ಪಂ.ಕ್ಷೇತ್ರ ವ್ಯಾಪ್ತಿಯಲ್ಲಿ 20 ಕೋಟಿ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ಕೊರೊನಾ ಮಾಹಾಮಾರಿಯ ನಡುವೆಯೂ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯದಲ್ಲಿ ಮುಂಚೂಣಿ ಯಲ್ಲಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ “ರಾಜ್ಯ ರಸ್ತೆ ನಿಧಿಯ”ಮೂಲಕ ಸುಮಾರು 13 ಕೋಟಿ ರೂ ಅನುದಾನದಲ್ಲಿ
ಬಂಟ್ವಾಳ—ಮೂಡಬಿದ್ರಿ ಲೋಕೋಪಯೋಗಿ ರಸ್ತೆಯ ಸೊರ್ನಾಡ್ ನಿಂದ ಪುಚ್ಚಮೊಗರು ತನಕ ರಸ್ತೆ ಅಗಲೀಕರಣ ಕಾಮಗಾರಿಗೆ ಸೆ.7 ರಂದು ಸೋಮವಾರ ಬೆಳಿಗ್ಗೆ ಸಿದ್ದಕಟ್ಟೆ ಯಲ್ಲಿ ಗುದ್ದಲಿ ಪೂಜೆ ನಡೆಯಿತು.

ಸಿದ್ದಕಟ್ಟೆಯಿಂದ ಹೊಕ್ಕಾಡಿಗೋಳಿ ರಸ್ತೆ ಮರುಡಾಮರೀಕರಣಕ್ಕೆ 50ಲಕ್ಷ ಬಂಡಸಾಲೆಯಿಂದ-ಎಣಿಲಕೋಡಿ-ಪಂಜಿಕಲ್ಲುಪದವು-ಆಚಾರಿಪಲ್ಕೆ ರಸ್ತೆಗೆ 3 ಕೋಟಿ ರೂಪಾಯಿ ಅನುದಾನದಲ್ಲಿ ರಸ್ತೆ ಡಾಮರೀಕರಣ,
2.0 ಕೋಟಿ ರೂ ವೆಚ್ಚದಲ್ಲಿ ಎಲಿಯನಾಡು ಗ್ರಾಮದ ಕೊನೆರೊಟ್ಟು ಮಾವಿನಕಟ್ಟೆ ರಸ್ತೆ ಗೆ ಶಿಲಾನ್ಯಾಸ
35 ಲಕ್ಷ ರೂ ವೆಚ್ಚದಲ್ಲಿ ಆಚಾರಿಪಲ್ಕೆ ಶಾಲಾ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ
5 ಲಕ್ಷ ರಸ್ತೆ ರೂ ವೆಚ್ಚದಲ್ಲಿ ನಿಂಗಲ್ ಬಾಕಿಮಾರು ರಸ್ತೆ ಕಾಮಗಾರಿ ಉದ್ಘಾಟನೆ 3.50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ವಾದ ನೆಲ್ಲಿಗುಡ್ಡೆ ರಸ್ತೆ ಉದ್ಘಾಟನೆ, 40.0 ಲಕ್ಷ ರೂ ವೆಚ್ಚದಲ್ಲಿ ಕುಜ್ಲುಬೆಟ್ಟು ಕಾಲೊನಿ ರಸ್ತೆ ಗೆ ಶಿಲಾನ್ಯಾಸ, 15.00 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಕೈಲಾರು ರಸ್ತೆ ಉದ್ಘಾಟನೆ, 6 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ವಾದ ಕುಜ್ಲುಬೆಟ್ಟು ರಸ್ತೆ ಉದ್ಘಾಟನೆ, 5.00 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ವಾದ ಕೇದಯಿ ರಸ್ತೆ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ಜಿ‌.ಪಂ.ಸದಸ್ಯ ತುಂಗಪ್ಪ ಬಂಗೇರ,ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ್ ಪ್ರಭು, ಪ್ರಮುಖರಾದ ರತ್ನಕುಮಾರ್ ಚೌಟ, ಸತೀಶ್ ಪೂಜಾರಿ, ಸಂದೇಶ್ ಶೆಟ್ಟಿ, ಮಂದಾರತಿ ಶೆಟ್ಟಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಪುರುಷೋತ್ತಮ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್ ,ಸಂಜೀವ ಪೂಜಾರಿ , ಪ್ರಕಾಶ್ ಅಂಚನ್, ಕರುಣೇಂದ್ರ ಪೂಜಾರಿ, ಲಕ್ಮೀನಾರಾಯಣ ಗೌಡ, ಚಿದಾನಂದ ಕುಲಾಲ್, ಆನಂದ ಕೋಟ್ಯಾನ್, ರಮಾನಾಥ ರಾಯಿ, ನಂದರಾಮರೈ, ಯಶೋಧರ ಕರ್ಬೆಟ್ಟು,ವಸಂತ ಕುಮಾರ್ ಅಣ್ಣಳಿಕೆ, ಸಂತೋಷ ರಾಯಿಬೆಟ್ಟು, ಸೀತರಾಮ ಪೂಜಾರಿ, ಡೊಂಬಯ ಅರಳ, ಗಣೇಶ್ ರೈ ಮಾಣಿ ಮತ್ತಿರರು ಉಪಸ್ಥಿತರಿದ್ದರು.

- Advertisement -

Related news

error: Content is protected !!