Friday, April 19, 2024
spot_imgspot_img
spot_imgspot_img

ಮಗನ ಆನ್‌ಲೈನ್ ಗೇಮ್ ಚಟಕ್ಕೆ ₹19 ಲಕ್ಷ ತೆತ್ತ ಪೋಷಕರು..!

- Advertisement -G L Acharya panikkar
- Advertisement -

ನವದೆಹಲಿ: ಆನ್​ಲೈನ್​ ಗೇಮಿಂಗ್‌ ಚಟಕ್ಕೆ ತಂದೆ ಕಷ್ಟಪಟ್ಟು ಸಂಪಾದಿಸಿದ್ದ 19 ಲಕ್ಷ ರೂ.ಗಳನ್ನು ವ್ಯರ್ಥ ಮಾಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಆಟವಾಡಲು ವರ್ಚುವಲ್ ಗನ್ ಮತ್ತು ಕಾರುಗಳನ್ನು ಖರೀದಿಸಿದ್ದ ಬಾಲಕ, ನಂತರ ಗೇಮಿಂಗ್ ಪ್ಲಾಟ್‌ಫಾರ್ಮ್​ನಲ್ಲಿ 20 ವರ್ಷದ ಯುವಕನ ಸ್ನೇಹ ಮಾಡಿದ್ದಾನೆ. ಅಪ್ರಾಪ್ತ ಬಾಲಕನ ತಂದೆ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಕ ತನ್ನ ತಾಯಿಯ ಮೊಬೈಲ್ ಫೋನ್ ಅನ್ನು ತನ್ನ ಆನ್‌ಲೈನ್ ತರಗತಿಗಳಿಗೆ ಬಳಸುತ್ತಿದ್ದ. ಆದರೆ ಆನ್​​​ಲೈನ್​​​ ಕ್ಲಾಸ್​​​ ಬದಲು ಆತ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಅಥವಾ ಬಿಜಿಎಂಐ, ಆನ್‌ಲೈನ್ ಗೇಮ್ ಆಡಲು ಸಾಕಷ್ಟು ಸಮಯ ಕಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!