Saturday, June 13, 2026
spot_imgspot_img
spot_imgspot_img

ಸಿಸಿಬಿ ಅಧಿಕಾರಿಗಳ ಕಾರ್ಯಾಚರಣೆ; ವಿದೇಶಿ ಪೆಡ್ಲರ್ಸ್​​ಗಳ ಬಂಧನ, 9 ಲಕ್ಷ ಮೌಲ್ಯದ ಡ್ರಗ್ಸ್ ವಶ

- Advertisement -
- Advertisement -

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ ಮಾದಕದ್ರವ್ಯ ನಿಗ್ರಹ ದಳ ಅಧಿಕಾರಿಗಳು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಪೆಡ್ಲರ್ಸ್​​ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 9 ಲಕ್ಷ ಮೌಲ್ಯದ 82 ಗ್ರಾಂ ಎಂಡಿಎಮ್​ಎ ಕ್ರಿಸ್ಟಲ್ ವಶಕ್ಕೆ ಪಡೆದಿದ್ದಾರೆ. ಬಂಧಿತರು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಒಂದು ಗ್ರಾಂ ಎಂಡಿಎಂಎ ಕ್ರಿಸ್ಟಲ್​​ ಅನ್ನು 8 ರಿಂದ 10 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದಾರೆ. ಬಂಧಿತರ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿ ಅಧಿಕಾರಿಗಳು ಶ್ವಾನದಳದ ಸಹಾಯದಿಂದ ಕಳೆದ ವಾರ ಚಾಮರಾಜಪೇಟೆ ಬಳಿಯ ಅಂಚೆ ಕಚೇರಿಯಲ್ಲಿ ಸುಮಾರು 3500 ಪೋಸ್ಟ್​​ಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಯುಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರ್‌ಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಬಂದಿರುವ 606 ಪೋಸ್ಟ್​ಗಳಲ್ಲಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್​ಗಳು ಪತ್ತೆಯಾಗಿದ್ದವು.

ಈ ಸಂಬಂಧ ಸಿಸಿಬಿ ಅಧಿಕಾರಿಗಳು ಒಟ್ಟು 12 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ತಂಡ ಕೆಲ ಪೆಡ್ಲರ್​ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪೆಡ್ಲರ್​ಗಳ ವಿಚಾರಣೆ ವೇಳೆ ಹಾಂಕಾಂಗ್, ಥೈಲ್ಯಾಂಡ್, ಅಮೆರಿಕಗೆ ಲಿಂಕ್ ಇರುವುದು ಪತ್ತೆಯಾಗಿದೆ. ಸಿಸಿಬಿ ವಿಶೇಷ ತಂಡ ಸದ್ಯ ಅಂತಾರಾಷ್ಟ್ರೀಯ ಡ್ರಗ್ ನೆಟ್​ವರ್ಕ್​ ಬಗ್ಗೆ ತನಿಖೆ ನಡೆಸುತ್ತಿದೆ.

ಬೆಂಗಳೂರಿಗೆ ಕೇವಲ ದೇಶದ ವಿವಿಧ ರಾಜ್ಯಗಳಿಂದ ಮಾತ್ರ ಡ್ರಗ್ಸ್ ಬರುತ್ತಿಲ್ಲ, ಬದಲಿಗೆ ವಿದೇಶಗಳಿಂದಲೂ ಬರುತ್ತಿದೆ ಎಂಬ ಮಾಹಿತಿ ಅಂಚೆ ಕಚೇರಿ ಮೇಲೆ ದಾಳಿ ಮಾಡಿದ ಮೇಲೆ ಗೊತ್ತಾಗಿದೆ. ಆದ್ದರಿಂದ ಸಿಸಿಬಿ ಪೊಲೀಸರು ವಿದೇಶಿ ಪಾರ್ಸೆಲ್​ಗಳ ಮೇಲೆ ನಿಗಾ ಇಟ್ಟಿದ್ದು, ಮಾದಕ ವಸ್ತುಗಳ ಜಾಲ ಮಟ್ಟ ಹಾಕಲು ಶತಪ್ರಯತ್ನ ನಡೆಸಿದ್ದಾರೆ.

- Advertisement -

Related news

error: Content is protected !!