Sunday, July 19, 2026
spot_imgspot_img
spot_imgspot_img

ಪದ್ಯಾಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ-ಇಂದಿನ ಕಾರ್ಯಕ್ರಮ

- Advertisement -
- Advertisement -

ಮಾರ್ಚ್ 31 ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಬೆಳಗಿನ ಪೂಜೆ, ಗಣಪತಿ ಹೋಮ, ಅಂಕುರ ಪೂಜೆ, ವೇದ ಪಾರಾಯಣಾದಿಗಳ ಆರಂಭ, ಕ್ಷಾಲನಾಧಿ ಸಪ್ತಶುದ್ಧಿ, ಪ್ರೋಕ್ತ ಪ್ರಾಯಶ್ಚಿತ್ತ ಹೋಮಗಳು, ಹೋಮಕಲಶಾಭಿಷೇಕ, ಚಂಡಿಕಾಯಾಗ, ಸಾಮೂಹಿಕ ಸೌಂದರ್ಯ ಲಹರಿ ಪಾರಾಯಣ ಹಾಗೂ ಮಧ್ಯಾಹ್ನ ಪೂಜೆಗಳು ನಡೆಯಲಿವೆ.

ಸಂಜೆ 5 ಗಂಟೆಯಿಂದ ಅಂಕುರಪೂಜೆ, ರಾತ್ರಿ ಪೂಜೆ, ಶ್ರೀ ದುರ್ಗಾ ಪೂಜೆ, ಅನುಜ್ಞಾಕಲಶ ಪೂರಣೆ ಹಾಗೂ ಅಧಿವಾಸ ಹೋಮಗಳು ನಡೆಯಲಿವೆ.

ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ರಾಘವ ರಾಮ ಭಜನಾ ತಂಡ (ಕನ್ಯಾನ ವಲಯ) ಹಾಗೂ ಕುರುಡಪದವು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ಶಿವಭಕ್ತ ವೀರಮಣಿ” ಪ್ರಸಂಗ ನಡೆಯಲಿದೆ. ಮಧ್ಯಾಹ್ನ 2.30ರಿಂದ ಶ್ರೀಮತಿ ನಯನ ಗೌರಿ ಸೆರಾಜೆ ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ.

ಸಂಜೆ 4.30ರಿಂದ ಸುಧರ್ಮ ಸಭೆಯಲ್ಲಿ ಮಾತೃಸಂಗಮ ಕಾರ್ಯಕ್ರಮ ನಡೆಯಲಿದೆ. ಆಶೀರ್ವಚನವನ್ನು ಶ್ರೀ ಗುರುದೇವದತ್ತ ಸಂಸ್ಥಾನ, ಒಡಿಯೂರು ಇಲ್ಲಿನ ಪರಮಪೂಜ್ಯ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ನೀಡಲಿದ್ದು, ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೂರ್ಯಕಾಂತಿ ದೀಪಪ್ರಜ್ವಲನೆ ನೆರವೇರಿಸಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರತಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸ ಶ್ರೀಮತಿ ಕಾಜಲ್ ಹಿಂದೂಸ್ಥಾನಿ ಖ್ಯಾತ ವಾಗ್ಮಿಗಳು ದೆಹಲಿ ಹಾಗೂ ಈ ಸಭೆಯಲ್ಲಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ

ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 7 ಗಂಟೆಯಿಂದ, ಪದಯಾನ ತಂಡದವರಿಂದ ‘ನೃತ್ಯಾಂಜಲಿ’ ಭರತನಾಟ್ಯ ಪ್ರದರ್ಶನ ನಡೆಯಲಿದ್ದು, ವಿದುಷಿ ಶ್ರೀಮತಿ ಪ್ರಣತಿ ಚೈತನ್ಯ ಪದ್ಯಾಣ ಹಾಗೂ ವಿದುಷಿ ಶ್ರೀಮತಿ ಚೈತ್ರ ಈಶಾನ್ಯ ಪದ್ಯಾಣ ನಿರ್ದೇಶನ ನೀಡಲಿದ್ದಾರೆ. ರಾತ್ರಿ 9 ಗಂಟೆಯಿಂದ ಲಕ್ಷ್ಮಿ ಗುರುರಾಜ್ ಎನ್.ಎನ್.ಯು. (ರಿ.)ಉಡುಪಿ ತಂಡದಿಂದ “ಶಿವಸಂಭೂತ” ನೃತ್ಯ ನಾಟಕ ಪ್ರದರ್ಶನ ನಡೆಯಲಿದ್ದು, ನಾಟ್ಯಮಯೂರಿ ವಿದುಷಿ ಶ್ರೀಮತಿ ಲಕ್ಷ್ಮಿ ಗುರುರಾಜ್ ಉಡುಪಿ ನಿರ್ದೇಶನ ಮಾಡಲಿದ್ದಾರೆ.

- Advertisement -

Related news

error: Content is protected !!