




ಏಪ್ರಿಲ್ 1, ಬುಧವಾರ ಬೆಳಿಗ್ಗೆ 7 ಗಂಟೆಯಿಂದ ಬೆಳಗಿನ ಪೂಜೆ, ಗಣಪತಿ ಹೋಮ, ಅಂಕುರಪೂಜೆ, ಶಾಂತಿ, ಶ್ವಶಾಂತಿ, ಚೋರಶಾಂತಿ, ಅದ್ಭುತ ಶಾಂತಿ ಹೋಮಾದಿಗಳು, ಹಾಗೂ ಹೋಮ ಕಲಶಾಭಿಷೇಕ, ಸೃಷ್ಟಿ ತತ್ತ್ವ ಹೋಮ, ಕಲಶಾಭಿಷೇಕ ಹಾಗೂ ಮಧ್ಯಾಹ್ನದ ಪೂಜೆ ನಡೆಯಲಿದೆ.
ಸಂಜೆ 5 ಗಂಟೆಯಿಂದ ಅಂಕುರಪೂಜೆ, ಶಯ್ಯಾಮಂಟಪ ಸಂಸ್ಕಾರ, ರಾತ್ರಿ ಪೂಜೆ ಹಾಗೂ ಅನುಜ್ಞಾ ಬಲಿ ಜರುಗಲಿವೆ.
ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಕುರುಡಪದವು ಮತ್ತು ಶ್ರೀ ರಾಮ ಭಜನಾ ಮಂಡಳಿ ಪಲ್ಲದಕೋಡಿ ಇವರಿಂದ ಭಜನೆ ನಡೆಯಲಿದೆ.
ಬೆಳಿಗ್ಗೆ 9.30ರಿಂದ ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ಮಂಜೇಶ್ವರ ಇವರಿಂದ “ಇಂದ್ರಜಿತು ಕಾಳಗ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಮಧ್ಯಾಹ್ನ 1.30ರಿಂದ ಶ್ರೀಮತಿ ಅದಿತಿ ಕೊಂಕೋಡಿ ಮತ್ತು ಬಳಗದವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” ಕಾರ್ಯಕ್ರಮ, ಮಧ್ಯಾಹ್ನ 2.30ರಿಂದ ವಿದುಷಿ ಡಾ. ನಿಶಿತಾ ಪುತ್ತೂರು ಅವರ ನಿರ್ದೇಶನದಲ್ಲಿ ನೃತ್ಯ ನಿರತ ಪುತ್ತೂರು ಪ್ರಸ್ತುತ ಪಡಿಸುವ “ಭರತನಾಟ್ಯ ಕಾರ್ಯಕ್ರಮ” ನಡೆಯಲಿದೆ.
ಸಂಜೆ 4.30ರಿಂದ ನಡೆಯುವ ಸುಧರ್ಮ ಸಭೆಯಲ್ಲಿ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಪಂಜಿಗುಡ್ಡೆ ಈಶ್ವರ ಭಟ್ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಯಜಮಾನ ಶ್ರೀ ಕರಿಯಣ್ಣ ಪಕಳ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಧಾರ್ಮಿಕ ಉಪನ್ಯಾಸವನ್ನು ವೇದಮೂರ್ತಿ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್, ಧಾರ್ಮಿಕ ವಿದ್ವಾಂಸರು ನಡೆಸಿಕೊಡಲಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಂ ನ ಟ್ರಸ್ಟಿ ನರೇಶ್ ಕುಮಾರ್ ಇವರು ಗೌರವ ಉಪಸ್ಥಿತರಿರಲಿದ್ದಾರೆ ಹಾಗೂ ಇನ್ನಿತರ ಗಣ್ಯರು ಈ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 7 ಗಂಟೆಯಿಂದ ಡಾ. ವಿನಯಾ ಪದ್ಯಾಣ ಮತ್ತು ಬಳಗ, ಬೆಂಗಳೂರು ಇವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ ನಡೆಯಲಿದೆ.








