Monday, July 20, 2026
spot_imgspot_img
spot_imgspot_img

ಪದ್ಯಾಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ-ಇಂದಿನ ಕಾರ್ಯಕ್ರಮ

- Advertisement -
- Advertisement -

ಪದ್ಯಾಣ: ಏಪ್ರಿಲ್ 4, ಶನಿವಾರದ ದಿನ ವಿವಿಧ ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ಜರುಗಲಿವೆ. ಬೆಳಿಗ್ಗೆ 7 ಗಂಟೆಯಿಂದ ಸೋಪಾನಪೂಜೆ, ಗಣಪತಿ ಹೋಮ, ಅಂಕುರಪೂಜೆ, ಪರಿವಾರ ಪ್ರತಿಷ್ಠೆಗಳು ಹಾಗೂ ಗೀತಾಜ್ಞಾನ ಯಜ್ಞ ಇವರಿಂದ ಶ್ರೀಮದ್ಭಗವದ್ಗೀತಾ ಪಾರಾಯಣ ನಡೆಯಲಿದೆ. ಸಂಜೆ 5 ಗಂಟೆಯಿಂದ ಅಂಕುರಪೂಜೆ, ಸೋಪಾನಪೂಜೆ, ಪರಿವಾರ ದೇವರಿಗೆ ಕಲಶ ಪೂರಣೆ, ಅಧಿವಾಸ ಹೋಮ, ಬ್ರಹ್ಮಕಲಶ ಮಂಟಪ ಸಂಸ್ಕಾರ ಹಾಗೂ ಬ್ರಹ್ಮಕಲಶ ಮಂಡಲ ರಚನೆ ನಡೆಯಲಿದೆ.

ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ, ಬೇಡಗುಡ್ಡೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ, ವಗೆನಾಡು ಇವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ 9.30ರಿಂದ ಶ್ರೀಮತಿ ವಿದ್ಯಾ ಜಯರಾಮ್ ಕಜೆ ಮತ್ತು ಬಳಗದವರಿಂದ “ಭಕ್ತಿ ಸಂಗೀತ” ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.30ರಿಂದ ಪ್ರಸಾದ್ ಬಾಯಾರು ಮತ್ತು ಬಳಗದವರಿಂದ “ಹರಿನಾಮ ಸಂಕೀರ್ತನೆ” ನಡೆಯಲಿದ್ದು, 2.30ರಿಂದ ನೃತ್ಯಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ ಕು. ಆದ್ಯಗೌರಿ ಅಡ್ಕತ್ತಿಮಾರು ಮತ್ತು ಬಳಗದವರಿಂದ “ನೃತ್ಯಾಮೃತಂ” ಕಾರ್ಯಕ್ರಮ ನಡೆಯಲಿದೆ.

ಸಂಜೆ 4.30ರಿಂದ ಸುಧರ್ಮ ಸಭೆ ಜರುಗಲಿದ್ದು, ಪರಮಪೂಜ್ಯ ಶ್ರೀ ಶ್ರೀ ಜಿತಕಾಮಾನಂದಜೀ ಮಹಾರಾಜ್ ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮಂಗಳೂರು ಆಶೀರ್ವಚನ ನೀಡಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕರು ವೇದಮೂರ್ತಿ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಸಭೆಯಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಜೆ 7 ಗಂಟೆಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡಬಿದಿರೆ ಇವರಿಂದ “ಆಳ್ವಾಸ್ ಸಾಂಸ್ಕೃತಿಕ ವೈಭವ” ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!