Saturday, May 18, 2024
spot_imgspot_img
spot_imgspot_img

ಟಿಕ್ ಟಾಕ್ ಮಾಡುತ್ತಿದ್ದ ನಾಲ್ವರಿಗೆ ಗುಂಡಿಟ್ಟು ಹತ್ಯೆ! – ಪಾಕ್ ನಲ್ಲಿ ಅಮಾನುಷ ಕೃತ್ಯ

- Advertisement -G L Acharya panikkar
- Advertisement -

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ನಾಲ್ವರು ಟಿಕ್​ಟಾಕ್​ ಕಲಾವಿದರಿಗೆ ಗುಂಡಿಕ್ಕಿ ಅಮಾನುಷವಾಗಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಹತ್ಯೆಯಾದ ನಾಲ್ವರಲ್ಲಿ ಓರ್ವ ಮಹಿಳೆ ಕೂಡ ಸೇರಿದ್ದಾರೆ.

ನಾಲ್ವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಿದ್ದರು. ಅದರಲ್ಲೂ ಹೆಚ್ಚು ಸಮಯ ಟಿಕ್​ಟಾಕ್​​ನಲ್ಲಿ ಬ್ಯುಸಿಯಾಗಿರುತ್ತಿದ್ದರು ಎಂದು ಆರೋಪಿಸಲಾಗಿದೆ. ಇನ್ನು ಹತ್ಯೆಯಾದ ಇಬ್ಬರ ಹೆಸರು ಕೂಡ ಗೊತ್ತಾಗಿದ್ದು, ಮುಸ್ಕಾನ್ ಮತ್ತು ಅಮೀರ್ ಅಂತಾ ಹೇಳಲಾಗಿದೆ. ಮೂಲಗಳ ಪ್ರಕಾರ ಇವರಿಬ್ಬರು ಸ್ನೇಹಿತರಾಗಿದ್ದರು.

ಘಟನೆ ಬಳಿಕ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 9ಎಂಎಂ ಪಿಸ್ತೂಲ್​ನಿಂದ ಶೂಟೌಟ್ ಮಾಡಲಾಗಿದೆ ಅನ್ನೋದು ಗೊತ್ತಾಗಿದೆ. ಮೃತರು ಕೆಲವು ವೈಯಕ್ತಿಕ ಸಮಸ್ಯೆಗೆ ಒಳಗಾಗಿರೋದು ಕಂಡು ಬಂದಿದೆ. ಆದರೆ ಘಟನೆಯನ್ನ ಕಣ್ಣಾರೆ ಕಂಡವರು ಯಾರೂ ಇಲ್ಲ ಅಂತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!