Saturday, May 18, 2024
spot_imgspot_img
spot_imgspot_img

ಪಾಕ್ ಸೇನೆಗೆ ತಾಲಿಬಾನ್ ಉಗ್ರರಿಂದ ಭಾರಿ ದಾಳಿ: 15 ಯೋಧರ ಹತ್ಯೆ, 63 ಸೈನಿಕರ ಅಪಹರಣ

- Advertisement -G L Acharya panikkar
- Advertisement -

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿರುವ ಕುರ್ರಾಮ್ ನಲ್ಲಿ ತಾಲಿಬಾನ್ ಭಯೋತ್ಪಾದಕರು ಪಾಕಿಸ್ತಾನ ಸೇನೆಯ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಕ್ಯಾಪ್ಟನ್ ಸೇರಿದಂತೆ 12 ರಿಂದ 15 ಸೈನಿಕರು ಮೃತಪಟ್ಟಿದ್ದಾರೆ. ಅನೇಕ ಸೈನಿಕರು ಗಾಯಗೊಂಡಿದ್ದು, 63 ಪಾಕ್ ಸೈನಿಕರನ್ನು ತಾಲಿಬಾನ್ ಭಯೋತ್ಪಾದಕರು ಅಪಹರಿಸಿದ್ದಾರೆ ಎನ್ನಲಾಗಿದೆ.

ನಿಷೇಧಿತ ತೆಹ್ರಿಕ್ ಎ ತಾಲಿಬಾನ್ ಭಯೋತ್ಪಾದಕರ ಗುಂಪಿನ ವಿರುದ್ಧ ಪಾಕಿಸ್ತಾನ ಸೈನಿಕರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ದೊಡ್ಡ ನಷ್ಟ ಅನುಭವಿಸಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ 28 ಬಲೂಚ್ ರೆಜಿಮೆಂಟ್‌ನ ಕ್ಯಾಪ್ಟನ್ ಅಬ್ದುಲ್ ಬಸಿತ್ ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಸೈನಿಕರು ಕೊಲ್ಲಲ್ಪಟ್ಟರು. ಬಸಿತ್ ಪಾಕ್ ಫ್ರಾಂಟಿಯರ್ ಕಾರ್ಪ್ಸ್ ವಿಂಗ್‌ನ ಥಾಲ್ ಸ್ಕೌಟ್ಸ್ ಗೆ ಡೆಪ್ಯುಟೇಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಪಾಕಿಸ್ತಾನದ ಉತ್ತರ ಖೈಬರ್ ಪಖ್ತುನ್ಖ್ವಾ ಅಥವಾ ಕೆಪಿಕೆ ಪ್ರಾಂತ್ಯದಲ್ಲಿ ಕುರ್ರಾಮ್ ಜಿಲ್ಲೆಗೆ ಸೇರಿದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಸೇನೆಯ 63 ಸೈನಿಕರನ್ನು ಅಪಹರಿಸಲಾಗಿದೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರೂ ಸಾವನ್ನಪ್ಪಿದ್ದಾರೆ. ಸೇನೆಯಿಂದ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.

- Advertisement -

Related news

error: Content is protected !!