Tuesday, July 28, 2026
spot_imgspot_img
spot_imgspot_img

ಕಾಶ್ಮೀರದಲ್ಲಿ ಉಗ್ರರ ಕಳ್ಳ ಸುರಂಗ ಮಾರ್ಗ ಪತ್ತೆ: ಪಾಕ್​ ನರಿ ಬುದ್ಧಿ ಮತ್ತೆ ಬಯಲು!

- Advertisement -
- Advertisement -

ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಕಾವಲು ಕಾಯುತ್ತಿರುವ ಭಾರತದ ಧೀರ ಯೋಧರಿಗೆ ಮತ್ತೊಂದು ಗಂಭೀರ ಸಮಸ್ಯೆ ಎದುರಾಗಿದೆ. ಭಾರತದ ವಿರುದ್ದ ಪರೋಕ್ಷ ಯುದ್ದ ಸಾರಿರುವ ಪಾಕಿಸ್ತಾನ ಸುರಂಗ ಮಾರ್ಗದ ಮೂಲಕ ಭಾರತಕ್ಕೆ ಉಗ್ರರನ್ನು ನುಸುಳಿಸುವ ಪ್ರಯತ್ನ ನ಼ಡೆಸುತ್ತಿದೆ.

ಎರಡನೆ ಬಾರಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸುರಂಗ ಸಂಚು ಬಯಲಾಗಿದೆ. ಸಾಂಬಾ ವಲಯದಲ್ಲಿ ಪಾಕಿಸ್ತಾನ ನಿರ್ಮಿತ ಸುರಂಗ ಮಾರ್ಗವನ್ನು ಪತ್ತೆ ಹಚ್ಚಲಾಗಿದೆ. ಇದೇ ಸುರಂಗ ಮಾರ್ಗದ ಮೂಲಕ ಇತ್ತೀಚೆಗೆ ಹತರಾದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸದಸ್ಯರು ಭಾರತಕ್ಕೆ ನುಸುಳಿದ್ದರು ಎಂಬ ಸಂಶಯ ವ್ಯಕ್ತವಾಗಿದೆ.

ಡ್ರೋಣ್ ಮೂಲಕ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸಲು ಯತ್ನಿಸುತ್ತಿರುವ ಪಾಕಿಸ್ತಾನ ಸುರಂಗ ಮಾರ್ಗದ ಮೂಲಕ ಭಾರತಕ್ಕೆ ರವಾನಿಸುವ ಸಂಚು ಹೂಡಿದೆ. ಪಾಕಿಸ್ತಾನ ಹೊಸ ಹೊಸ ತಂತ್ರ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಗಡಿ ಭದ್ರತಾಪಡೆ ಕಟ್ಟೆಚ್ಚರ ವಹಿಸಿದೆ.

- Advertisement -

Related news

error: Content is protected !!