Saturday, April 27, 2024
spot_imgspot_img
spot_imgspot_img

ನಿಷ್ಠಾವಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲಿನ ಸುಳ್ಳು ಆರೋಪ- ದ.ಕ ಪಿಡಿಓ ಕ್ಷೇಮಾಭಿವೃದ್ಧಿ ಸಂಘಟನೆಯಿಂದ ಖಂಡನೆ ಮತ್ತು ಮನವಿ

- Advertisement -G L Acharya panikkar
- Advertisement -

ಮಂಗಳೂರು: ನಿಷ್ಠಾವಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಸುಳ್ಳು ಆರೋಪವನ್ನು ಖಂಡಿಸಿ ಜಿಲ್ಲಾ ಸಂಘಟನೆಯು ಸಾರ್ವಜನಿಕ ಪ್ರಕಟಣೆಯಲ್ಲಿ ಪ್ರಕಟಿಸುವಂತೆ ಕೋರಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಮನವಿ ಸಲ್ಲಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಂಜ್‌ವಿನ್ ಪುಡ್ಸ್ ಎಂಬ ಬೇಕರಿ ಘಟಕವನ್ನು ಸ್ಥಳೀಯ ಸಾರ್ವಜನಿಕರ ದೂರಿನ ಮೇರೆಗೆ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಮಂಗಳೂರು ಇವರು ಸ್ಥಗಿತಗೊಳಿಸುವಂತೆ ಸೂಚಿಸಿರುವ ಕಾರಣ ಮಳವೂರು ಗ್ರಾಮ ಪಂಚಾಯತಿಯ ಸದರಿ ಘಟಕದ 2020-21ನೇ ಸಾಲಿನ ಉದ್ದಿಮೆ ಪರವಾನಿಗೆಯು ನವೀಕರಿಸದೆ ವಿಲೇ ಇಟ್ಟಿರುತ್ತದೆ.

ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಳ್ಳುತ್ತಿರುವ ಪ್ರಸನ್ನ ರವಿ ಮತ್ತು ಸದರಿ ಬೇಕರಿ ಘಟಕದ ಮಾಲೀಕರಾದ ಶ್ರೀಮತಿ ವಾಣಿ ಎಂಬವರು ಕೆಲವು ಜನರನ್ನು ಸೇರಿಸಿಕೊಂಡು ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಮಾಣಿಕ ಅಧಿಕಾರಿ ಶ್ರೀ ವೆಂಕಟರಮಣ ಪ್ರಕಾಶ್‌ರವರ ವಿರುದ್ದ ಸತ್ಯ ವಿಷಯವನ್ನು ಮರೆಮಾಚಿ ಸುಳ್ಳು ಆರೋಪಗಳನ್ನು ಹೊರಿಸಿ ವ್ಯಕ್ತಿಗತವಾಗಿ ನಿಂದಿಸಿ ತೇಜೋವಧೆಗೊಳಿಸಿದ್ದಾರೆ.

ಈ ಘಟನೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಿಸಿ ಸ್ಥಳೀಯ ಟಿವಿ ಚಾನಲ್ ಮತ್ತು ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ನಿಷ್ಠಾವಂತ ಅಧಿಕಾರಿಯ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸಲಾಗಿದೆ. ಈ ಘಟನೆಯು ಸಾರ್ವಜನಿಕರಿಗೆ ಸರಕಾರಿ ವ್ಯವಸ್ಥೆಯಲ್ಲಿ ಅಪನಂಬಿಕೆ ಹುಟ್ಟುವಂತೆ ಮಾಡಿರುವ ಪ್ರಚೋದನೆ ಆಗಿರುತ್ತದೆ ಎಂದು ಘಟಕವು ತಿಳಿಸಿದೆ.

ಒಬ್ಬ ಅಧಿಕಾರಿ ತಪ್ಪು ಮಾಡಿದರೆ ಅವನ ವಿರುದ್ಧ ಮೇಲ್ಮನವಿ ಸಲ್ಲಿಸಿ ನ್ಯಾಯ ಪಡೆಯಲು ಸಂವಿಧಾನಿಕವಾಗಿ ಮಾರ್ಗವಿದ್ದರೂ ಈ ರೀತಿಯಾಗಿ ಅವಹೇಳನದ ಮೂಲಕ ಪರವಾನಿಗೆ ನವೀಕರಿಸಲು ಅನ್ಯ ಮಾರ್ಗ ಬಳಸಿರುವುದು ಕಾನೂನಿಗೆ ವಿರುದ್ದವಾಗಿರುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ವಿಷಯದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಒಬ್ಬ ನಿಷ್ಠಾವಂತ ಅಧಿಕಾರಿಯ ಮೇಲೆ ಸಂಶಯಗೊಳ್ಳುವಂತೆ ಟಿವಿ ಚಾನಲ್‌ನಲ್ಲಿ ಸುದ್ದಿ ಪ್ರಸಾರ ಮತ್ತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವುದು ನ್ಯಾಯ ಸಮ್ಮತವಲ್ಲ.

ಈ ಘಟನೆಯನ್ನು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಬಗ್ಗೆ ಸದರಿ ಆರೋಪದಾರರ ಮೇಲೆ ಮಾನನಷ್ಟ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!