Saturday, June 6, 2026
spot_imgspot_img
spot_imgspot_img

ಪಂಜಿಮೊಗರು ವಾರ್ಡಿನ ಉರುಂದಾಡಿ ಗುಡ್ಡೆಯ ತಡೆಗೋಡೆ ಕುಸಿತ.ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ

- Advertisement -
- Advertisement -

ಮಂಗಳೂರು: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಹಾಮಳೆಗೆ ಪಂಜಿಮೊಗರು ವಾರ್ಡಿನ ಉರುಂದಾಡಿ ಗುಡ್ಡೆ ನಿವಾಸಿಯಾದ ಜಯಂತ್ ಅವರ ಮನೆಯ ತಡೆಗೋಡೆ ಕುಸಿದಿದ್ದು, ಬಿ. ಕೆ. ಇಂದಿರಾ ಸುರೇಶ್ ಅವರ ಮನೆಯ ತಡೆಗೋಡೆ ಕುಸಿದು ಪಕ್ಕದ ಮನೆಗೆ ಹಾನಿಯಾಗಿದ್ದು ಹಾಗೂ ಗುಡ್ಡೆಯಂಗಡಿ ನಿವಾಸಿಯಾದ ಚಂದ್ರ ಅವರ ಮನೆಯ ಹಿಂದಿನ ಗುಡ್ಡ ಕುಸಿದು ಮನೆಗೆ ಭಾಗಶಃ ಹಾನಿಯಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತರ ಮನವಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕೂಳೂರು ಶಕ್ತಿಕೇಂದ್ರ ಪ್ರಮುಖ್ ಪ್ರಜ್ಞೇಶ್ ಶೆಟ್ಟಿ, ಪಂಜಿಮೊಗರು ಶಕ್ತಿಕೇಂದ್ರ ಪ್ರಮುಖ್ ಧನಕೀರ್ತಿ ಬಲ್ಲಾಳ್, ರಮೇಶ್ ಶೆಟ್ಟಿ ವಿವೇಕನಗರ, ಚಂದ್ರಿಕಾ ಪ್ರಭಾಕರ್, ಎಲ್ಲಾ ಬೂತಿನ ಅದ್ಯಕ್ಷರು, ಹಾಗೂ ಪದಾಧಿಕಾರಿಗಳು, ಸ್ಥಳೀಯ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

- Advertisement -

Related news

error: Content is protected !!