Thursday, March 28, 2024
spot_imgspot_img
spot_imgspot_img

*ಜನ್ಮವಿತ್ತ ಮಗುವಿಗೆ ತಮ್ಮ ಜಿಲ್ಲೆಯ ಡಿಸಿ ಹೆಸರನ್ನೇ ನಾಮಕರಣ ಮಾಡಿದ ಘಟನೆ*

- Advertisement -G L Acharya panikkar
- Advertisement -

ಬಳ್ಳಾರಿ -ದಾವಣಗೆರೆಯಲ್ಲಿ ನೆಲೆಸಿರುವ ದಂಪತಿ ತಮ್ಮ ಮಗುವಿಗೆ ಡಿಸಿ ಎಸ್.ಎಸ್.ನಕುಲ್ ಅವರ ಹೆಸರನ್ನಿಟ್ಟಿದ್ದಾರೆ.

ಮಹಿಳೆಯ ತವರು ಮನೆ ಬಳ್ಳಾರಿಯಾಗಿದ್ದರಿಂದ ಕಳೆದ ಎರಡು ತಿಂಗಳ ಹಿಂದೆ ಹೆರಿಗೆಗೆಂದು ಬಳ್ಳಾರಿಗೆ ಬಂದಿದ್ದರು. ಈ ವೇಳೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈ ವೇಳೆ ಹೆರಿಗೆಯನ್ನು ಯಶಸ್ವಿಯಾಗಿಯೇ ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಮಾಡಿಸಲಾಗಿತ್ತು.

ಅದೃಷ್ಟವಶಾತ್ ತಾಯಿಗೆ ಸೋ‌ಂಕಿದ್ದರೂ ಮಗುವಿಗೆ ಸೋಂಕು ತಗುಲಿರಲಿಲ್ಲ. ಅಂದು ಹೆರಿಗೆಯಾದ ಬಳಿಕ ಜಿಲ್ಲಾಸ್ಪತ್ರೆಗೆ ಡಿಸಿ ಎಸ್.ಎಸ್.ನಕುಲ್ ತೆರಳಿದ್ದಾರೆ. ಈ ವೇಳೆ ಬಾಣಂತಿಯನ್ನು ಚಿಕಿತ್ಸೆ ಚೆನ್ನಾಗಿ ಸಿಗುತ್ತಿದೆಯಾ ಎಂದು ಮಾತನಾಡಿಸಿದ್ದಾರೆ‌.

ಜಿಲ್ಲಾಧಿಕಾರಿಯವರ ಈ ಕಾಳಜಿಗೆ ಮನಸೋತ ಈ ದಂಪತಿ ಇದೀಗ ತಮ್ಮ ಗಂಡು ಮಗುವಿಗೆ ಡಿಸಿ ಅವರ ಹೆಸರಾದ ನಕುಲ್ ಎಂದು ನಾಮಕರಣ ಮಾಡಿದ್ದಾರೆ ಎನ್ನಲಾಗಿದೆ.

ಜಿಲ್ಲಾಧಿಕಾರಿ ಇದೊಂದು ಅವಿಸ್ಮರಣೀಯ ಘಟನೆ, ನಿಜಕ್ಕೂ ಅಚ್ಚರಿಯಾಗುತ್ತಿದೆ. ದಂಪತಿಗಳಿಗೆ ಮತ್ತು ಮಗುವಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

- Advertisement -

Related news

error: Content is protected !!