Thursday, July 23, 2026
spot_imgspot_img
spot_imgspot_img

ಪೆರುವಾಯಿ: ಭ್ರಷ್ಟಾಚಾರ ಆರೋಪದಲ್ಲಿ ಜೈಲುವಾಸ ಅನುಭವಿಸಿದ ಪೆರುವಾಯಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ನಫೀಸ ನೇತೃತ್ವದಲ್ಲಿ ಗ್ರಾಮಸಭೆ

- Advertisement -
- Advertisement -

ಗ್ರಾಮಸ್ಥರಿಂದ ತೀವ್ರ ವಿರೋಧ; ಮೋಟಕುಗೋಳಿಸಿದ ಗ್ರಾಮಸಭೆ

ಪೆರುವಾಯಿ ಗ್ರಾಮ ಪಂಚಾಯತ್‌ನಲ್ಲಿ ಇಂದು ನಡೆದ ಗ್ರಾಮ ಸಭೆಯಲ್ಲಿ ಪೆರುವಾಯಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ನಫೀಸ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ನಫೀಸರವರು ಭ್ರಷ್ಟಾಚಾರದ ಲಂಚದ ಆರೋಪವೆಸಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು, ಜೈಲುವಾಸ ಕೂಡ ಅನುಭವಿಸಿದ್ದರು. ಈ ಹಿನ್ನಲೆಯಲ್ಲಿ ಗ್ರಾಮಸ್ಥರೆಲ್ಲರೂ ಜೈಲಿಗೆ ಹೋದ ಗ್ರಾಮ ಪಂಚಾಯತ್‌ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯುವುದು ಬೇಡ ಎಂದು ತರಾಟೆಗಿಳಿದರು.

ಕಳೆದ ಭಾರಿ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಸಭೆ ನಡೆಯುವಾಗ ಪಂಚಾಯತ್‌ ಅಧ್ಯಕ್ಷೆ ನಫೀಸರವರು ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದರು. “ನಾನು ಒಂದೇ ಒಂದು ರೂಪಾಯಿಯ ಭ್ರಷ್ಟಾಚಾರವೆಸಗಿದ ದಾಖಲೆ ಇದ್ದಲ್ಲಿ ನಾನೇ ರಾಜೀನಾಮೆ ನೀಡುತ್ತೇನೆ” ಎಂದು ಮಾಧ್ಯಮ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ ಕೆಲ ತಿಂಗಳುಗಳಲ್ಲೇ ನಫೀಸರವರು ಲಂಚದ ಆರೋಪದಲ್ಲಿ ಲೋಕಾಯಕ್ತ ಬಲೆಗೆ ಬಿದ್ದು ಜೈಲುವಾಸ ಅನುಭವಿಸಿದ್ದರು.

ಇದನ್ನೇ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಕಳೆದ ಭಾರಿಯ ನಫೀಸರವರ ಹೇಳಿಕೆಯ ಆಡಿಯೋ ಮತ್ತು ವಿಡಿಯೋವನ್ನು ಪ್ಲೇ ಮಾಡಲು ಮನಿವಿ ಮಾಡಿದರು. ಆದರೆ ನೋಡಲ್‌ ಆಫಿಸರ್‌ ಅದಕ್ಕೆ ಅನುಮತಿ ನೀಡಲಿಲ್ಲ. ನಂತರ ತರಾಟೆ ತೆಗೆದುಕೊಂಡ ಗ್ರಾಮಸ್ಥರೆಲ್ಲರು ನಮಗೆ ಇಂಥ ಅಧ್ಯಕ್ಷೆ ಬೇಡ,ಇಂಥ ಅಧ್ಯಕ್ಷೆಯ ನೇತೃತ್ವದಲ್ಲಿ ನಮ್ಮ ಗ್ರಾಮ ಸಭೆ ನಡೆಯುವುದು ಬೇಡ, ನಮ್ಮ ಗ್ರಾಮಕ್ಕೆ ಮರ್ಯಾದೆ ಇದೆ ನಮ್ಮ ಗ್ರಾಮವನ್ನು ಇಂತಹ ಭ್ರಷ್ಟಾಚಾರ ಆರೋಪದ ಅಧ್ಯಕ್ಷತೆಯಲ್ಲಿ ನಡೆಸುವುದು ಬೇಡ ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ನಂತರ ಗ್ರಾಮ ಸಭೆಯನ್ನು ಮೊಟಕುಗೊಳಿಸಿದ್ದಾರೆ.

- Advertisement -

Related news

error: Content is protected !!