Thursday, June 25, 2026
spot_imgspot_img
spot_imgspot_img

ಹೆಚ್​.ಡಿ. ದೇವೇಗೌಡರಿಗೆ ಕರೆಮಾಡಿ ದಂಪತಿಯ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

- Advertisement -
- Advertisement -

ನವದೆಹಲಿ: ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಪ್ರಧಾನಿ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು.. ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಜೀ ಅವರಿಗೆ ಕರೆ ಮಾಡಿ ಅವರ ಮತ್ತು ಅವರ ಪತ್ನಿ ಆರೋಗ್ಯದ ಕುರಿತು ವಿಚಾರಿಸಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇನ್ನು ಈ ಕುರಿತು ಟ್ವೀಟ್ ಮಾಡಿರುವ ದೇವೇಗೌಡರು.. ಪ್ರಧಾನಿ ಮೋದಿಯವರು ನಮ್ಮ ಆರೋಗ್ಯ ಕುರಿತು ಕರೆ ಮಾಡಿ ವಿಚಾರಿಸಿಕೊಂಡಿದ್ದಾರೆ. ಅಲ್ಲದೇ ಯಾವುದೇ ನಗರದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಿದ್ದಾರೆ. ಅವರಿಗೆ ನಾನು ಬೆಂಗಳೂರಿನಲ್ಲೇ ಉತ್ತಮ ಚಿಕಿತ್ಸೆ ನೀಡುತ್ತಿರುವುದಾಗಿ ಹೇಳಿದ್ದೇನೆ. ಜೊತೆಗೆ ಮುಂದಿನ ದಿನಗಳ ಮಾಹಿತಿಯನ್ನ ನೀಡುತ್ತೇನೆ ಎಂದಿದ್ದಾರೆ

- Advertisement -

Related news

error: Content is protected !!