Monday, May 6, 2024
spot_imgspot_img
spot_imgspot_img

ಪುತ್ತೂರು: ನಿಷೇಧಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದಾಗ ಪೊಲೀಸ್‌ ದಾಳಿ : ಪ್ರಕರಣ ದಾಖಲು

- Advertisement -G L Acharya panikkar
- Advertisement -

ಪುತ್ತೂರು: ನಿಷೇಧಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದಾಗ ಪೊಲೀಸ್‌ ದಾಳಿ ನಡೆಸಿದ ಘಟನೆ ಪುತ್ತೂರು ತಾಲೂಕು, ಪುತ್ತೂರು ಕಸಬಾ ಗ್ರಾಮದ , ಲಿನೆಟ್‌ ಜಂಕ್ಷನ್‌‌ನ ಉದಯಗಿರಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಬಳಿ ನಡೆದಿದೆ.

ದಿನಾಂಕ: 01.04.2024 ರಂದು ಮಧ್ಯಾಹ್ನ ಸಮಯ, ಲಿನೆಟ್‌ ಜಂಕ್ಷನ್‌‌ನ ಉದಯಗಿರಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಬಳಿ ಪಾನ್‌ಬೀಡ ಅಂಗಡಿಯಲ್ಲಿ, ಪಡ್ನೂರು ಗ್ರಾಮ, ಪುತ್ತೂರು ನಿವಾಸಿ ಲಕ್ಷ್ಮಣ ಎಂಬಾತನು, ನಿಷೇಧಿತ ಕೇರಳದ ಲಾಟರಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ, ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಂದಕುಮಾರ್ ಎಂ.ಎಂ ರವರು ಹಾಗೂ ಸಿಬ್ಬಂದಿಗಳು, ಆರೋಪಿಯನ್ನು ವಿಚಾರಿಸಿದಾಗ ಆತನು ನಿಷೇಧಿತ ಕೇರಳ ರಾಜ್ಯದ ಲಾಟರಿ ಟಿಕೇಟನ್ನು ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಬಗ್ಗೆ ತಪಾಸಣೆ ನಡೆಸಿದಾಗ ಒಟ್ಟು ರೂ 1,550/- ಮೌಲ್ಯದ 31 ಲಾಟರಿ ಟಿಕೇಟ್‌ ಗಳು ಹಾಗು ಲಾಟರಿ ಮಾರಾಟ ಮಾಡಿ ಬಂದ ರೂ 1,100/- ನಗದು ದೊರಕಿದೆ. ಸದ್ರಿ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಪಡಿಸಿ, ಆರೋಪಿಯ ವಿರುದ್ದ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 33/2024 ಕಲಂ;- 5,7(3) The lotteries (Regulation) Act 1998 ಕಾಯ್ದೆಯಡಿ ಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!