Thursday, June 4, 2026
spot_imgspot_img
spot_imgspot_img

ಪೆರಾಜೆ ಕೋಳಿ ಅಂಕಕ್ಕೆ ಪೊಲೀಸರ ದಾಳಿ; ಕೋಳಿ ಹಿಡಿದುಕೊಂಡೇ ಕಾಲ್ಕಿತ್ತ ಜನ

- Advertisement -
- Advertisement -

ಪೆರಾಜೆಯಲ್ಲಿ ಕೋಳಿ ಅಂಕದ ಮೇಲೆ ಕೊಡಗು ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.

ಪೆರಾಜೆಯ ದೇವಸ್ಥಾನದ ಸಮೀಪ ಕೋಳಿ ಅಂಕ ನಡೆದಿತ್ತು. ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ವಿಚಾರವನ್ನು ತಿಳಿದು ಕೊಡಗು ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ನಡೆಯುತ್ತಿದ್ದಂತೆ ಕೋಳಿ ಹಿಡಿದುಕೊಂಡೇ ಜನರು ಕೋಳಿ ಅಂಕದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೋಳಿ ಅಂಕದಲ್ಲಿ ಸುಮಾರು 400ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಆಗಾಗ್ಗೆ ಕೋಳಿ ಅಂಕ ನಡೆಯುತ್ತಿದ್ದು ಪೊಲೀಸರು ಹದ್ದಿನ ಕಣ್ಣು ಇಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

- Advertisement -

Related news

error: Content is protected !!