Friday, April 19, 2024
spot_imgspot_img
spot_imgspot_img

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆದಾಯ ತೆರಿಗೆ ನೋಂದಣಿ ರದ್ದು!

- Advertisement -G L Acharya panikkar
- Advertisement -

ಆದಾಯ ತೆರಿಗೆ ಇಲಾಖೆಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೋಂದಣಿಯನ್ನು ರದ್ದುಗೊಳಿಸಿದೆ. ಸೆಕ್ಷನ್ 12 ಎಎ (3) ರ ಅನ್ವಯ ಐಟಿ ನೋಂದಣಿಯನ್ನು ರದ್ದುಪಡಿಸಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚಟುವಟಿಕೆಗಳು ನಿಯಮ ಉಲ್ಲಂಘಿಸಿದ ಹಿನ್ನಲೆ ರದ್ದು ಮಾಡಲು ಐಟಿ ಇಲಾಖೆ ಮುಂದಾಗಿದೆ.

ಆದಾಯ ತೆರಿಗೆ ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನುಭವಿಸುತ್ತಿರುವ 80 ಜಿ ಪ್ರಯೋಜನವನ್ನು ಐಟಿ ಇಲಾಖೆ ರದ್ದುಗೊಳಿಸಿದೆ ಎಂದು 2021 ರ ಮಾರ್ಚ್ 22 ರ ಆದೇಶದಲ್ಲಿ ತಿಳಿಸಲಾಗಿದೆ. ಪಿಎಫ್‌ಐ ಐಟಿ ಕಾಯ್ದೆಯ ಸೆಕ್ಷನ್ 13 (1) (ಬಿ) ಅನ್ನು ಉಲ್ಲಂಘಿಸಿದೆ ಮತ್ತು ಆ ಮೂಲಕ ಈ ಕಾಯಿದೆಯ ಸೆಕ್ಷನ್ 12 ಎಎ (4) (ಎ) ಅನ್ನು ಆಕರ್ಷಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಮುದಾಯಗಳಲ್ಲಿ ಸೌಹಾರ್ದತೆ ಮತ್ತು ಸಹೋದರತ್ವವನ್ನು ನಾಶಮಾಡುವಲ್ಲಿ ಪಿಎಫ್‌ಐ ತೊಡಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಜಿ ಜನರು ಲೋಕೋಪಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹವನ್ನು ನೀಡುತ್ತದೆ. ಆದರೆ ಪಿಎಫ್‌ಐ ಇದಕ್ಕೆ ತದ್ವಿರುದ್ಧವಾಗಿದೆ.

ಕಳೆದ ವರ್ಷ ಜನವರಿಯಲ್ಲಿ, ಉತ್ತರ ಪ್ರದೇಶದಲ್ಲಿ ನಡೆದ ಸಿಎಎ ವಿರೋಧಿ ಗಲಭೆಯ ಸಂದರ್ಭದಲ್ಲಿ ಪಿಎಫ್‌ಐ ಸದಸ್ಯರು ಮಾಡಿದ ಹಿಂಸಾಚಾರದಿ0ದಾಗಿ ಈ ಸಂಘಟನೆಯನ್ನು ನಿಷೇಧ ಹೇರಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿತ್ತು. ಪಿಎಫ್‌ಐ ಸದಸ್ಯರು ಆಗಾಗ್ಗೆ ಕೋಮುವಾದಿ ಉದ್ದೇಶಗಳೊಂದಿಗೆ ಕೊಲೆ ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ಹಲವು ಸಂದರ್ಭದಲ್ಲಿ ಮುನ್ನಲೆಗೆ ಬಂದಿದೆ.

ಫೆಬ್ರವರಿಯಲ್ಲಿ, ಹಿಂದೂಗಳ ಮೊಪ್ಲಾ ಹತ್ಯಾಕಾಂಡವನ್ನು ಗುರುತಿಸುವ ರ‍್ಯಾಲಿಯಲ್ಲಿ, ಪಿಎಫ್‌ಐ ಕಾರ್ಯಕರ್ತರು ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿ ಕೀಳು ಮಟ್ಟದಲ್ಲಿ ತನ್ನ ಹುಚ್ಚಾಟವನ್ನು ಮೆರೆದಿತ್ತು. ಇದೇ ಮೆರವಣಿಗೆಯಲ್ಲಿ ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾ ಮುಹಮ್ಮದೂರ್ ರಸೂಲುಲ್ಲಾ ಹೀಗೆ ವಿವಿಧ ಇಸ್ಲಾಮಿಕ್ ಪಠಣಗಳನ್ನು ಉದ್ಘೋಷಿಸಲಾಗಿತ್ತು.

ಇಷ್ಟು ಮಾತ್ರವಲ್ಲದೆ. ಪಿಎಫ್‌ಐನ ಕಚೇರಿಗಳಲ್ಲಿ ಇತ್ತೀಚೆಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಂಸ್ಥೆ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದೆ. ಭಾರತದಾದ್ಯಂತದ ವಿವಿಧ ಘಟಕಗಳು ವಿದೇಶದಲ್ಲಿ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿದೇಶಿ ಹಣಗಳ ಬಗ್ಗೆ ಪಿಎಫ್‌ಐನ ಬ್ಯಾಂಕ್ ಖಾತೆಗಳಲ್ಲಿ, ಸಂಘಟನೆಯ ಬಳಿ ಯಾವುದೇ ರೀತಿಯ ದಾಖಲೆ ಇಲ್ಲದೆ ಇರುವುದು ಸ್ಪಷ್ಟವಾಗಿದೆ. ಅಕ್ರಮ ದಾರಿಯ ಮೂಲಕ ವಿದೇಶದಿಂದ ಹಣವನ್ನು ಸಂಗ್ರಹಿಸಿದ್ದು ತನಿಖೆಯಿಂದ ಬಹಿರಂಗವಾಗಿದೆ.

- Advertisement -

Related news

error: Content is protected !!