Thursday, April 25, 2024
spot_imgspot_img
spot_imgspot_img

*ಪಾಪ್ಯುಲರ್ ಫ್ರಂಟ್ ಪೊನ್ನೋಡಿ ಘಟಕದ ವತಿಯಿಂದ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಅಭಿಯಾನ..*

- Advertisement -G L Acharya panikkar
- Advertisement -

ಬಂಟ್ವಾಳ:- ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪೊನ್ನೋಡಿ ಘಟಕದ ವತಿಯಿಂದ ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯನ್ನು ಪರಿಸರದ ಅರ್ಹ 150 ಕ್ಕಿಂತಲೂ ಹೆಚ್ಚಿನ ಫಲಾನುಭವಿಗಳಿಗೆ ನೋಂದಣಿ ಮಾಡುವ ಮೂಲಕ ಸಾಮಾಜಿಕ ಕಾರ್ಯ ಮೆರೆದಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಪೊನ್ನೋಡಿ ಘಟಕ ಅಧ್ಯಕ್ಷ ಮುಬಾರಕ್ ಪೊನ್ನೋಡಿ ವಹಿಸಿದ್ಧರು. ಈ ಸಂದರ್ಭ ಪಾಪ್ಯುಲರ್ ಫ್ರಂಟ್ ಬಿ.ಸಿ ರೋಡು ಡಿವಿಝನ್ ಅಧ್ಯಕ್ಷರಾದ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿ ಪಿ.ಎಫ್.ಐ ಸಂಘಟನೆಯು ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಸೇವೆ ಮಾಡುತ್ತಿದ್ದು, ದೇಶಾದ್ಯಂತ ಕೋವಿಡ್ ದಫಣ ಕಾರ್ಯ, ಕೋವಿಡ್ ಕಿಟ್ಟ್, ರಕ್ತದಾನ ಶಿಬಿರದಂತಹ ಹಲವಾರು ಸಾಮಾಜಿಕ ಕಾರ್ಯವನ್ನು ಸಂಘಟನೆ ಮಾಡುತ್ತಾ ಬಂದಿದೆ. ಇಂತಹ ಜನಸೇವೆಗಳೇ ಸಂಘಟನೆಯ ದ್ಯೇಯ ವಾಗಿದೆ ಎಂದರು.

ಅತಿಥಿಗಳಾಗಿ ಮಫತ್ಲಾಲ್ ಆಯಿಷಾ ಮಸೀದಿಯ ಉಸ್ತಾದ್ ಶಂಶುದ್ಧೀನ್ ಅಝ್ಹರಿ, ಪಾಪ್ಯುಲರ್ ಫ್ರಂಟ್ ಕೈಕಂಬ ವಲಯ ಅಧ್ಯಕ್ಷ ಶಾಫಿ ಎಂ.ಆರ್,  ಲತೀಫ್ ಕೆ.ಎಚ್, ಹುಸೈನಬ್ಬ ಕೊಮೋರು ಮತ್ತಿತರರು ಉಪಸ್ಥಿತರಿದ್ದರು. ಅಶ್ಫಾಕ್ ಸ್ವಾಗತಿಸಿ, ಸಿದ್ಧೀಕ್ ಕೊಮೋರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -

Related news

error: Content is protected !!