Wednesday, May 15, 2024
spot_imgspot_img
spot_imgspot_img

ಆಪರೇಷನ್ ಥಿಯೇಟರ್‌ನಲ್ಲಿ ಪ್ರಿ-ವೆಡ್ಡಿಂಗ್ ಶೂಟ್ – ಜನರ ಕೆಂಗಣ್ಣಿಗೆ ಗುರಿಯಾದ ವೈದ್ಯ ಜೋಡಿ

- Advertisement -G L Acharya panikkar
- Advertisement -

ಇತ್ತೀಚಿನ ದಿನಗಳಲ್ಲಿ ಮದುವೆಯಾಗುತ್ತಿರುವ ಹೆಚ್ಚಿನ ಜೋಡಿಗಳು ಮದುವೆಯ ಮೊದಲು ವೆಡ್ಡಿಂಗ್ ಫೊಟೋ ಶೂಟ್ ಗಳನ್ನು ಮಾಡಿಸಿಕೊಳ್ಳುತ್ತಾರೆ. ಇಲ್ಲೋಂದು ವೈದ್ಯರು ವಿಭಿನ್ನ ರೀತಿಯಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸಿಕೊಂಡು ಜನರ ಕೆಂಗಣ್ಣಿಗೆ ಗುರಿಯಾದ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಈ ಜೋಡಿಗಳು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸಿಕೊಂಡು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಘಟನೆಯು ನಡೆದಿದ್ದು ಭರಮಸಾಗರ ಮೂಲದ ಜಿಲ್ಲಾಸ್ಪತ್ರೆಯ ಗುತ್ತಿಗೆ ಅಧಾರಿತ ವೈದ್ಯ ಡಾ.ಅಭಿಷೇಕ್ ಎಡವಟ್ಟು ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ವೈದ್ಯ ಡಾ.ಅಭಿಷೇಕ್ ಫೊಟೋ ಶೂಟ್ ಗಾಗಿ ರೋಗಿಯೊಬ್ಬರನ್ನು ಬೆಡ್‌ ಮೇಲೆ ಮಲಗಿಸಿ, ಆಪರೇಷನ್‌ ಮಾಡುವಂತೆ, ಇನ್ನೊಂದೆಡೆ ಭಾವಿ ಪತ್ನಿ ಅಭಿಷೇಕ್‌ಗೆ ಸಹಾಯ ಮಾಡುವಂತೆ ಚಿತ್ರೀಕರಿಸಿದ್ದಾರೆ. ಅಂತಿಮವಾಗಿ ಆಪರೇಷನ್‌ ಮುಗಿಯಿತು ಅಂದ ಬಳಿಕ ರೋಗಿ ಎದ್ದು ಕುಳಿತುಕೊಳ್ಳುತ್ತಾನೆ. ಈ ಎಲ್ಲಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ಆಸ್ಪತ್ರೆಯಲ್ಲಿ ಫೊಟೋಶೂಟ್ ಮಾಡಿಸಿಕೊಂಡ ಡಾ.ಅಭಿಷೇಕ್ ಜೋಡಿಯ ಪ್ರಿ ವೆಡ್ಡಿಂಗ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ವೈದ್ಯರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು. ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ದುರ್ಬಳಕೆ ಮಾಡಲಾಗಿದೆ ಎಂದು ಬಗ್ಗೆ ಜನ ಕಿಡಿಕಾರುತ್ತಿದ್ದಾರೆ.

- Advertisement -

Related news

error: Content is protected !!