Wednesday, April 16, 2025
spot_imgspot_img
spot_imgspot_img

ಕೊಡಿಮಾರು ಅಬೀರ ಶ್ರೀ ಉಳ್ಳಾಕುಲು, ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ

- Advertisement -
- Advertisement -

ಕಡಬ ತಾಲೂಕು ಬೆಳಂದೂರು ಗ್ರಾಮದ ಕೊಡಿಮಾರು ಅಬೀರ ಶ್ರೀ ಉಳ್ಳಾಕುಲು , ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಎ 19,20ರಂದು ನಡೆಯಲಿದ್ದು, ನೇಮೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮವು ಎ.14ರಂದು ನಡೆಯಿತು.

ಅರ್ಚಕ ಶಿವರಾಮ ಉಪಾಧ್ಯಾಯ ಕಲ್ಪಡ ಧಾರ್ಮಿಕ ವಿಧಿ ವಿಧಾನ ನೇರವೇರಿಸಿದರು.ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ತಿಮ್ಮಪ್ಪ ಗೌಡ ಕಾಯೆರ್ತಡಿ, ಅಧ್ಯಕ್ಷ ಉದಯ ರೈ ಮಾದೋಡಿ, ಉಪಾಧ್ಯಕ್ಷ ರುಕ್ಮಯ್ಯ ಗೌಡ ಅಜಿರಂಗಳ, ಚಂದಪ್ಪ ಗೌಡ ಹೊಸೊಕ್ಲು, ಲಿಂಗಪ್ಪ ಗೌಡ ಸಾರಕರೆ, ಕುಶಾಲಪ್ಪ ಗೌಡ ಪನೆತ್ತಡಿ, ಬಾಲಚಂದ್ರ ಅಬೀರ, ಸುಂದರ ಕಂಡೂರು,ಪ್ರಧಾನ ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಶೇಷಪ್ಪ ಕರೆಮನೆ, ಜೊತೆ ಕಾರ್ಯದರ್ಶಿ ಶೇಖರ ಅಬೀರ, ಅಭಿವೃದ್ಧಿ ಸಮಿತಿಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ,ಪದ್ಮಯ್ಯ ಗೌಡ, ಮೋಹಿತ್ ಕಾಯೆರ್ತಡಿ, ಚೋಮ ಪಾತಾಜೆ,ಆಶ್ವಿ ಮಾದೋಡಿ,ದೈವಗಳ ಸೇವಾಕರ್ತರಾದ ವಿಷ್ಣು ಗೌಡ ಅಬೀರ ಉಪಸ್ಥಿತರಿದ್ದರು.ಎ 19ರಂದು ಬೆಳಿಗ್ಗೆ ತೋರಣ ಮುಹೂರ್ತ, ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ ಹಾಗೂ ತಂಬಿಲ ಮತ್ತು ರಾತ್ರಿ ದೈವಗಳ ಭಂಡಾರ ಹಿಡಿಯುವುದು.ಎ 20ರಂದು ಬೆಳಿಗ್ಗೆ ಉಳ್ಳಾಕುಲು ದೈವಗಳ ನೇಮೋತ್ಸವ,ಬೈಸು ನಾಯಕ,ಬೇಡ ದೈವಗಳ ನೇಮೋತ್ಸವ, ಚಾಮುಂಡಿ ,ಗುಳಿಗ ದೈವಗಳ ನೇಮೋತ್ಸವ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!