Sunday, June 21, 2026
spot_imgspot_img
spot_imgspot_img

ವಿಟ್ಲ: ಗ್ರಾಮೀಣ ಸಹಕಾರಿ ಬ್ಯಾಂಕಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

- Advertisement -
- Advertisement -

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ಶ್ರೀಯುತ ಶ್ರೀಪ್ರಕಾಶ್ ಕುಕ್ಕಿಲ ಇವರು ನೆರವೇರಿಸಿ, ದೇಶಾಭಿಮಾನ ಮತ್ತು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ ಸ್ಫೂರ್ತಿ ತುಂಬಿದರು.

ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಗನ್ನಾಥ ಸಾಲಿಯಾನ್.ಹೆಚ್.ಉಪಾಧ್ಯಕ್ಷರಾದ ಶ್ರೀ ಮನೋರಂಜನ್ ಕೆ.ಆರ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಜಯಂತಿ ಯಚ್ ರಾವ್, ಶ್ರೀಮತಿ ಶುಭಲಕ್ಷ್ಮಿ, ಶ್ರೀ ದಯಾನಂದ ಆಳ್ವ ಕೆ. ಶ್ರೀ ಪೂವಪ್ಪ ಎಸ್. ಶ್ರೀ ದಿವಾಕರ ವಿ. ಶ್ರೀ ಕೇಶವ ಎ, ಶ್ರೀ ಗೋವರ್ಧನ್ ಕುಮಾರ್ ಐ, ಶ್ರೀ ಭಾಸ್ಕರ್ ಶೆಟ್ಟಿ, ಶ್ರೀ ರಾಮದಾಸ ಶೆಣೈ, ಶ್ರೀ ಮೋಹನ್ ಕೆ ಎಸ್ ಹಾಗೂ ಶ್ರೀ ಸತೀಶ್ ಪಿ ಹಾಗೂ ಅತಿಥಿಗಳಾಗಿ ಶ್ರೀ ತುಳಸಿದಾಸ್ ಶೆಣೈ ಇವರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೃಷ್ಣ ಮುರಳಿ ಶ್ಯಾಮ್. ಕೆ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಶ್ರೀಯುತ ಶ್ರೀ ಪ್ರಕಾಶ್ ಕುಕ್ಕಿಲ ಹಾಗೂ ಶ್ರೀ ತುಳಸಿದಾಸ್ ಶೆಣೈ ಇವರನ್ನು ಬ್ಯಾಂಕಿನ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಬ್ಯಾಂಕಿನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶ್ರೀ ಚಂದ್ರಹಾಸ ರಾಣ್ಯ ಡಿ ಇವರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!