Saturday, May 4, 2024
spot_imgspot_img
spot_imgspot_img

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಗೆ ಧ್ವಜಾರೋಹಣದ ಮೂಲಕ ಚಾಲನೆ

- Advertisement -G L Acharya panikkar
- Advertisement -

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಗೆ ಎ.10 ರಂದು ಬೆಳಿಗ್ಗೆ 10.26ಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.

ಬೆಳಿಗ್ಗೆ ದೇವಳದ ತಂತ್ರಿ ಕುಂಟಾರು ವೇ ಮೂ ರವೀಶ ತಂತ್ರಿಯವರ ನೇತೃತ್ವದಲ್ಲಿ ಜಾತ್ರೆ ಆರಂಭಗೊಂಡಿತ್ತು. ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ಸಹಿತ ಹಲವು ನಿತ್ಯ ಪರಿಚಾರಕರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಧ್ವಜಾರೋಹಣದ ವೇಳೆ ಬಾನೆತ್ತರದಲ್ಲಿ ವರ್ಷಂಪ್ರತಿಯಂತೆ ಗರಡುಗಳೆರಡು ಕೊಡಿಮರಕ್ಕೆ ದೂರದಿಂದಲೆ ಸುತ್ತು ಬಂದು ಹೋಗಿರುವುದು ವಿಶೇಷವಾಗಿತ್ತು.

- Advertisement -

Related news

error: Content is protected !!