




79 ನೆಯ ಸ್ವಾತಂತ್ರೋತ್ಸವದ ಸಂಭ್ರಾಮಾಚರಣೆಯ ಸಂದರ್ಭದಲ್ಲಿ ಮ್ಯಾನಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್ ಧ್ವಜಾರೋಹಣ ನೆರವೇರಿಸಿದರು. ವಿದ್ಯಾಸಂಸ್ಥೆಗಳ ಸಂಚಾಲಕರಾದ ಚಂದ್ರಶೇಖರ ಭಟ್, ಮುಖ್ಯ ಅತಿಥಿಗಳಾದ ಡಾ|| ಸುರೇಶ್ ಜಿ., ವಿದ್ಯಾಕೇಂದ್ರದ ಪ್ರಾಂಶುಪಾಲ ಶಿವಕುಮಾರ ಎಂ., ಉಪಪ್ರಾಂಶುಲರಾದ ರಾಧಾಕೃಷ್ಣ ಹೊಳ್ಳ ಉಪಸ್ಥಿತರಿದ್ದರು. ಪಿಯುಸಿಯ ಉದಯ ನಾಯ್ಕ ವಂದಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ KSHEMA ದ ಪ್ರಾಧ್ಯಾಪಕರಾದ ಡಾ|| ಸುರೇಶ್ ಜಿ. ವಿದ್ಯಾರ್ಥಿಗಳು ನಮ್ಮ ಹಿರಿಯ ವಿಜ್ಞಾನಿಗಳಾದ ಡಾ|| ಎ.ಪಿ.ಜೆ ಕಲಾಂರಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು, ಧರ್ಮರಾಯ, ಶ್ರೀರಾಮರಂತಹ ಜೀವನವನ್ನು ನಡೆಸಿ, ಕಾಮ, ಕ್ರೋಧ, ಲೋಭ ಇತ್ಯಾದಿ ಅರಿಷಡ್ವರ್ಗಗಳನ್ನು ಹೋಗಲಾಡಿಸಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳಾದ ಚಿರಾಗ್ ಡಿ.ವಿ., ಸುಹಾನ್, ಹಾಗು ಅವನೀಶ್ ಎಸ್. ರೈ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಸಭೆಯ ಅಧ್ಯಕ್ಷರಾದ ಕೆ.ಎಸ್. ಕೃಷ್ಣ ಭಟ್ ಹಾಗು ಟ್ರಸ್ಟ್ ನ ಕಾರ್ಯದರ್ಶಿ ಚಂದ್ರಶೇಖರ ಭಟ್ ಸ್ವಾತಂತ್ರೋತ್ಸವದ ಶುಭಹಾರೈಸಿದರು. ಹಿರಿಯ ತ್ಯಾಗಜೀವಿಯಾದ ಮಧುಸೂದನ ಉಪಸ್ಥಿತರಿದ್ದರು. ವಿದ್ಯಾಕೇಂದ್ರದ ಪ್ರಾಂಶುಪಾಲ ಶಿವಕುಮಾರ ಎಂ. ಸ್ವಾಗತಿಸಿದರು. ವಿದ್ಯಾಕೇಂದ್ರದ అర్షిని ರಾವ್ ನಿರೂಪಿಸಿದರು. ಪಿಯುಸಿಯ ಉಪನ್ಯಾಸಕ ಪ್ರಮೋದ್ ಎಚ್. ವಂದಿಸಿದರು. ಸಭಾಕಾರ್ಯಕ್ರಮದ ಆನಂತರ ಪಿಯುಸಿ ಹಾಗು ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.








