Friday, April 26, 2024
spot_imgspot_img
spot_imgspot_img

ಹತ್ರಾಸ್ ಪ್ರಕರಣ ಖಂಡಿಸಿ ವಿಟ್ಲದಲ್ಲಿ ಪ್ರತಿಭಟನೆ !!

- Advertisement -G L Acharya panikkar
- Advertisement -

ವಿಟ್ಲ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಡೆಮಾಕ್ರಸಿ ಯೂತ್ ಫೆಡರೇಶನ್ ಮತ್ತು ಪ್ರಜಾ ಪರಿವರ್ತನಾ ವೇದಿಕೆ ಸಹಯೋಗದಲ್ಲಿ ವಿಟ್ಲದ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.


ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮಹಿಳಾ ವಿಭಾಗದ ಅಧ್ಯಕ್ಷೆ ಅಶುರಾ ಬಿವಿ ಮಾತನಾಡಿ ದೇಶದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಅದರಲ್ಲಿ ಕೆಲವೇ ಕೆಲವು ಪ್ರಕರಣಗಳು ಹೊರ ಬಂದಿದೆ. ಯುಪಿ ಸರ್ಕಾರ ಪ್ರಕರಣವನ್ನು ಮುಚ್ಚು ಹಾಕಲು ಪ್ರಯತ್ನಿಸುತ್ತಿದೆ. ಒಂದು ಹೆಣ್ಣು ಮಗುವನ್ನು ರಕ್ಷಿಸಲು ಸಾಧ್ಯವಾಗದ ಇಂತಹ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ಯೋಗ್ಯತೆ ಇಲ್ಲ. ಇದು ಇಡೀ ಹೆಣ್ಣಿನ ಕುಳಕ್ಕೆ ಮಾಡಿರುವ ಅವಮಾನವಾಗಿದೆ. ಇಂತಹ ಸರ್ಕಾರವನ್ನು ತಕ್ಷಣವೇ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.


ದ.ಕ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ವಿಟ್ಲ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಎಕೆ ಕುಕ್ಕಾಜೆ, ಡಿವೈಎಫ್ ಐ ಮುಖಂಡ ಇಕ್ಬಾಲ್ ಹಳೆಮನೆ, ತುಳಸೀದಾಸ್, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ಅಬ್ದುಲ್ ರಹಿಮಾನ್, ಹೈದರ್ ಅಲಿ ನೀರ್ಕಜೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಇಸಾಕ್ ನೀರ್ಕಜೆ, ಬಿ.ಟಿ ಕುಮಾರ್, ಭಾಸಿಮ್ ಉಕ್ಕುಡ, ಮಹಮ್ಮದ್ ಅಲಿ ಮದಕ, ಕೃಷ್ಣಪ್ಪ ಪುದ್ದೋಟು, ಡಿವೈಎಫ್ ಐ ವಿಟ್ಲ ವಲಯ ಅಧ್ಯಕ್ಷ ನೂಜುಮ್ ಅಳಿಕೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!