Wednesday, June 24, 2026
spot_imgspot_img
spot_imgspot_img

ಭಾರತದಲ್ಲಿ ಮತ್ತೆ ಕಾರ್ಯಚರಿಸಲು ಪಬ್-ಜಿ ಸಿದ್ಧತೆ!!!

- Advertisement -
- Advertisement -

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಮೊಬೈಲ್​ ಬಳಕೆದಾರರನ್ನು ಪಬ್​-ಜಿ ಯಷ್ಟು ಬಹುವಾಗಿ ಸೆಳೆದ ಗೇಮಿಂಗ್​ ಬೇರೊಂದಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಹಳ್ಳಿಯಿಂದ ಹಿಡಿದು ಪಟ್ಟಣಗಳ ವರೆಗೆ ಮಕ್ಕಳಿಂದ ಹಿಡಿದು ಮಧ್ಯ ವಯಸ್ಕರವರೆಗೆ ಹೀಗೆ ಎಲ್ಲಾ ವರ್ಗದ ಸ್ಮಾರ್ಟ್​​ ಫೋನ್​ ಬಳಕೆದಾರರನ್ನು ಆವರಿಸಿದ್ದ ಪಬ್​-ಜಿ ಚೀನಾ ಪುಂಡಾಟದ ದೆಸೆಯಿಂದ ಭಾರತದಲ್ಲಿ ಬ್ಯಾನ್​ ಆಗಿತ್ತು.


ಈಗ ಕುತೂಹಲಕಾರಿ ನಿಲುವು ತಾಳಿರುವ ಪಬ್​-ಜಿ ಕಾರ್ಪೋರೇಶನ್ ತನ್ನ ಸಂಸ್ಥೆಯ ಪರವಾಗಿ ಭಾರತದಲ್ಲಿ ಕಾರ್ಯ ನಿರ್ವಹಿಸಲು ಕಾರ್ಪೋರೇಟ್​​ ಡೆವಲಪ್​ಮೆಂಟ್​​ ಡಿವಿಷನ್ ಮ್ಯಾನೆಜರ್​ ಹುದ್ದೆಗಾಗಿ ಲಿಂಕ್​ಡೆನ್​ ವೆಬ್​ಸೈಟ್​​ನಲ್ಲಿ ಅರ್ಜಿ ಆಹ್ವಾನಿಸಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮತ್ತೆ ಭಾರತದಲ್ಲಿ​​ ಕಾರ್ಯಚರಿಸಲು ಪಬ್​-ಜಿ ಸಿದ್ಧತೆ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಪಬ್​-ಜಿಯ ಭಾರತದ ಡಿವಿಷನ್​ ಮ್ಯಾನೇಜರ್​ ಹುದ್ದೆಗೆ ಈವರೆಗೆ 200 ಭಾರತೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

- Advertisement -

Related news

error: Content is protected !!