Friday, April 19, 2024
spot_imgspot_img
spot_imgspot_img

ಪುಣಚ ರಸ್ತೆ ಅತಿಕ್ರಮಣ: ತೆರವುಗೊಳಿಸಲು ದಲಿತ್ ಸೇವಾ ಸಮಿತಿ ಆಗ್ರಹ

- Advertisement -G L Acharya panikkar
- Advertisement -

ವಿಟ್ಲ: ಪುಣಚ ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿರುವ ಪದವು ಕೊಪ್ಪಳ ಸಾರ್ವಜನಿಕ ರಸ್ತೆಯನ್ನು ಜಯಂತಿ ಹಾಗೂ ಬಬಿತ ಎಂಬವರು ಅತ್ರಕ್ರಮಿಸಿ ಸಾರ್ವಜನಿಕರ ಸಂಚಾರವನ್ನು ನಿರ್ಬಂದಿಸಿದ್ದಾರೆ. ಇದರಿಂದ ಈ ಭಾಗದ ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಸಕಾರಣವಿಲ್ಲದೇ ಈ ರೀತಿ ಸಾರ್ವಜನಿಕರ ತೊಂದರೆ, ಅಶಾಂತಿ ಸೃಷ್ಟಿಸುತ್ತಿರುವವರ ವಿರುದ್ಧ ಸಂಬಂಧಪಟ್ಟ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬಿ.ಕೆ ಬೆದ್ರಕಾಡು ದ.ಕ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ, ಬಂಟ್ವಾಳ ತಹಸೀಲ್ದಾರ್ ಅವರಿಗೆ ಆಗ್ರಹಿಸಿದ್ದಾರೆ.


ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಣೆ ನೀಡಿದರು. ಈಗಾಗಲೇ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಪಿಡಿಒ, ಗ್ರಾಮ ಕರಣಿಕರು ಭೇಟಿ ನೀಡಿ ಪರಿಶೀಲಿಸಿ, ತೆರವಿಗೆ ತಿಳಿಸಿದರೂ ಕ್ಯಾರೇ ಎನ್ನದೇ ಉದ್ಧಟತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ರಸ್ತೆ ಫಲಾನುಭವಿಗಳಾದ ಲೋಲಾಕ್ಷ ಅಗ್ರಾಳ, ಭುವನ್ ರೈ ಅಗ್ರಾಳ ಉಪಸ್ಥಿತರಿದ್ದರು.

- Advertisement -

Related news

error: Content is protected !!