Wednesday, July 22, 2026
spot_imgspot_img
spot_imgspot_img

ಪುಂಜಾಲಕಟ್ಟೆ: ಬಜಕುಡ್ಲು ಕುಟುಂಬಸ್ಥರ ತರವಾಡು ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ

- Advertisement -
- Advertisement -


ಪುಂಜಾಲಕಟ್ಟೆ: ಬಜಕುಡ್ಲು ಕುಟುಂಬಸ್ಥರ ತರವಾಡು ದೈವಸ್ಥಾನ ಕುಕ್ಕಳ ಮಡ್ಯಂತಾರು, ದರ್ಖಾಸು, ಪುಂಜಾಲಕಟ್ಟೆಯ ನೂತನ ತರವಾಡು ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ ಎಪ್ರಿಲ್ 17ರಿಂದ 21ರ ತನಕ ನಡೆಯಲಿದೆ.

ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಕುಕ್ಕಳ ದರ್ಖಾಸು ರಾಮಣ್ಣ ಮೂಲ್ಯರ ಮನೆಯ ಬಳಿ ನಿರ್ಮಿಸಲಾದ ಬಜಕುಡ್ಲು ಕುಟುಂಬಸ್ಥರ ತರವಾಡು ದೈವಸ್ಥಾನವು ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ರವಿ ಎನ್.ರವರ ಮಾರ್ಗದರ್ಶನದಲ್ಲಿ ತಂತ್ರಿಗಳಾದ ವೇ.ಮೂ| ಗುರುರಾಜ್ ಭಟ್ ಮಿಜಾರ್‌ರವರ ನೇತೃತ್ವದಲ್ಲಿ ನೂತನ ತರವಾಡು ಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಗಣಪತಿಹೋಮ, ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.

ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಆದರಣೀಯ ಸ್ವಾಗತ ಬಯಸುವ ಮಹಾಲಿಂಗ ಮೂಲ್ಯ ಕೊಚ್ಚಿ, ಕುಟ್ಟಿ ಮೂಲ್ಯ ಬಜಕುಡ್ಲು ಮತ್ತು ಕುಟುಂಬಸ್ಥರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!