Thursday, May 2, 2024
spot_imgspot_img
spot_imgspot_img

ವಿಟ್ಲ: ಪುತ್ತಿಲ ಪರಿವಾರ ಕುಂಡಡ್ಕ, ಕುಳ ಮತ್ತು ವಿಟ್ಲ ಮೂಡ್ನೂರು ಗ್ರಾಮದ ವತಿಯಿಂದ ಉಚಿತ ವೈದ್ಯಕೀಯ ಹಾಗೂ ದಂತ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಪುತ್ತಿಲ ಪರಿವಾರ ಕುಂಡಡ್ಕ, ಕುಳ ಮತ್ತು ವಿಟ್ಲ ಮೂಡ್ನೂರು ಗ್ರಾಮದ ವತಿಯಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್(ರಿ) ಗಾಂಧಿನಗರ ಮಂಗಳೂರು ಇದರ ಆಶ್ರಯದಲ್ಲಿ ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ಇದರ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ಹಾಗೂ ದಂತ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಕಾರ್ಯಕ್ರಮವು ಜು.30ರಂದು ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಪುತ್ತೂರಿನ ಅಧ್ಯಕ್ಷರು ಪ್ರಸನ್ನ ಮಾರ್ತಾ, ಯೇನಪೋಯ ಡೆಂಟಲ್‌ ಕಾಲೇಜಿನ ಉಪನ್ಯಾಸಕಿ ಡಾ. ಅಪೂರ್ವ, ಯೇನಪೋಯ ವಿಶ್ವವಿದ್ಯಾಲಯದ RHCDC ಅಧಿಕಾರಿ ಡಾ. ಶ್ರೀನಿವಾಸ ಪಟೇಲ್‌, ಯೇನಪೋಯ ಡೆಂಟಲ್‌ ಕಾಲೇಜಿನ ಪ್ರೊ. ಭರತ್‌ ಕುಮಾರ್‌, ಯೇನಪೋಯ ವಿಶ್ವವಿದ್ಯಾಲಯದ RHCDC ಗಾಯತ್ರಿ, ಚಂದ್ರಶೇಖರ ನಾಯಕ್, ನಿರಂಜನ್ ಹೆಬ್ಬಾರ್, ಸತ್ಯಸಾಯಿ ಸೇವಾ ಸಂಸ್ಥೆ ಕರ್ನಾಟಕ ಇದರ ಪದಾಧಿಕಾರಿಗಳು, ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕ ಸಂಚಾಲಕ ವೇಣುಗೋಪಾಲ ಶೆಟ್ಟಿ, ಪುತ್ತಿಲ ಪರಿವಾರ ವಿಟ್ಲದ ಅಧ್ಯಕ್ಷ ಮೋಹನ್ ಸೇರಾಜೆ, ಪುತ್ತಿಲ ಪರಿವಾರ ಕುಂಡಡ್ಕದ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ, ಪುತ್ತಿಲ ಪರಿವಾರ ಕುಳದ ಅಧ್ಯಕ್ಷ ಮನೋಹರ ಶೆಟ್ಟಿ ಜೈನೆರೆಕೋಡಿ ಉಪಸ್ಥಿತರಿದ್ದರು. ಈ ಸಂದರ್ಭ ಗುಣಶ್ರೀ ವಿದ್ಯಾಲಕ್ಕೆ ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್‌ ಪುತ್ತಿಲ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು VJ ನಮಿತಾ ನೆರವೇರಿಸಿ, ಸ್ವಾಗತ ಹರೀಶ್ ಪೂಜಾರಿ ಮರುವಾಳ ಹಾಗೂ ಧನ್ಯವಾದ ಕಾರ್ಯಕ್ರಮವನ್ನು ರಾಧಿಕಾ ರಾಜೇಶ್ ಭಟ್ ಕುಳ ನೆರವೇರಿಸಿದರು.

- Advertisement -

Related news

error: Content is protected !!